Publish Date: Sun, 20 Jan 2019 (16:28 IST)
Updated Date: Sun, 20 Jan 2019 (16:30 IST)
ಮಾರಿಗುಡಿಗುಡ್ಡ ಮತ್ತು ಗುಡ್ಡೆಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಮಾರಿಗುಡಿಗುಡ್ಡ ಮತ್ತು ಗುಡ್ಡೆಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ತಡರಾತ್ರಿ ನಡೆದಿದೆ. ಬೆಂಕಿಗೆ ಎಕರೆಗಟ್ಟಲೇ ಕಾಡು ಸುಟ್ಟು ಭಸ್ಮವಾಗಿದೆ.
ಗಾಳಿಯ ರಭಸಕ್ಕೆ ಬೆಂಕಿಯ ಕೆನ್ನಾಲಿಗೆ ವ್ಯಾಪಕವಾಗಿ ಹರಡಿ ಎಕರೆಗಟ್ಟಲೇ ಕಾಡು ನಾಶವಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಬೆಂಕಿ ವಾಚರ್ ಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಕಿಡಿಗೇಡಿಗಳ ಕೃತ್ಯವೇ ಇಲ್ಲವೆ ಅಗ್ನಿ ಆಕಸ್ಮಿಕವೇ ಎಂಬುದು ತನಿಖೆ ನಂತರ ತಿಳಿಯಲಿದೆ.
ಕಳೆದ ಒಂದು ವಾರದ ಹಿಂದೆಯಷ್ಟೇ ಸೂಕ್ಷ್ಮ ಅರಣ್ಯ ವಲಯವಾದ ಮೇಲುಕಾಮನಹಳ್ಳಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿತ್ತು.