Select Your Language

Notifications

webdunia
webdunia
webdunia
webdunia

ಈಗಲ್ಟನ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಕೈ ಶಾಸಕರು ಇಂದು ಸಂಜೆ ವಾಪಾಸ್

webdunia
ಬೆಂಗಳೂರು , ಭಾನುವಾರ, 20 ಜನವರಿ 2019 (11:17 IST)
ರಾಮನಗರ : ಆಪರೇಷನ್ ಕಮಲ'ದ ಭಯದಿಂದ  ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್ ಶಾಸಕರು ಇಂದು ವಾಪಸ್ ಆಗಲಿದ್ದಾರೆ.


ಈ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ‘ಈಗಲ್ಟನ್ ರೆಸಾರ್ಟ್ ನಲ್ಲಿರುವ ಕಾಂಗ್ರೆಸ್ ಶಾಸಕರು ಇಂದು ಸಂಜೆ ಸಭೆಯ ಬಳಿಕ ಹೊರಡಲಿದ್ದಾರೆ’ ಎಂದು ತಿಳಿಸಿದ್ದಾರೆ.


ಅಲ್ಲದೇ ‘ಬಿಜೆಪಿ ಸ್ನೇಹಿತರಿಗೆ ಈಗಲಾದ್ರೂ ಒಳ್ಳೆಯ ಬುದ್ಧಿ ಬಂದಿದೆ. 10 ದಿನಗಳ ಕಾಲ ಒಳ್ಳೆಯ ಗಾಳಿ ತೆಗೆದುಕೊಂಡಿದ್ದಾರೆ. ಬಿಜೆಪಿ ನಾಯಕರು ಬರ ಪರಿಸ್ಥಿತಿ ಅಧ್ಯಯನಕ್ಕೆ ಬರುತ್ತಾರೆ. ಹೀಗಾಗಿ ನಾವು ಜಿಲ್ಲಾ ಉಸ್ತುವಾರಿ ಸಚಿವರನ್ನು ಕಳಿಸುತ್ತೇವೆ’ ಎಂದು ಹೇಳಿದ್ದಾರೆ.


ಆದರೆ ಆಪರೇಷನ್ ಕಮಲದ ಸುಳಿಗೆ ಸಿಲುಕಿದ ಶಾಸಕರನ್ನು ಸದ್ಯ ರೆಸಾರ್ಟ್ ನಲ್ಲೇ ಇರಿಸುವ ಬಗ್ಗೆ ಕೈ ನಾಯಕರು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕುಮಾರಸ್ವಾಮಿ ಬಗ್ಗೆ ಅಸಮಾಧಾನಗೊಂಡ ಕೈ ಶಾಸಕರು; ಸಿಎಂ ರಾಜೀನಾಮೆ ನೀಡುವಂತೆ ಒತ್ತಾಯ