Publish Date: Fri, 22 Feb 2019 (14:43 IST)
Updated Date: Fri, 22 Feb 2019 (14:45 IST)
ಪ್ರೇಮ ವಿವಾಹಕ್ಕೆ ಮನೆಯವರಿಂದ ಅಡ್ಡಿ ಉಂಟಾದ ಪರಿಣಾಮ ಪ್ರೇಮಿಗಳು ಭಯಾನಕ ತೀರ್ಮಾನ ತೆಗೆದುಕೊಂಡಿದ್ದಾರೆ.
ಮನನೊಂದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಯನೈಡ್ ನುಂಗಿ ಆತ್ಮಹತ್ಯೆಗೆ ಜೋಡಿಹಕ್ಕಿಗಳು ಶರಣಾಗಿದ್ದಾರೆ. ಚೇತನ್ (25), ಯುವತಿ ಹೆಸರು ತಿಳಿದು ಬಂದಿಲ್ಲ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಭೂವನಹಳ್ಳಿಯಲ್ಲಿ ನಡೆದ ಘಟನೆ ಇದಾಗಿದೆ. ಚೇತನ್ ಭೂವನಹಳ್ಳಿ ನಿವಾಸಿ.
ಯುವತಿ ಶಿರಾದ ಮಾಗೋಡು ಗ್ರಾಮದವಳು.
ಒಂದೂವರೆ ತಿಂಗಳ ಹಿಂದೆ ಬೇರೊಬ್ಬ ಯುವತಿಯ ಜೊತೆಗೆ ಮದುವೆಯಾಗಿದ್ದ ಚೇತನ್, ಕಳೆದ ರಾತ್ರಿ ಸಯನೈಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಶಿರಾ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಮೃತ ದೇಹಗಳನ್ನು ಇಡಲಾಗಿತ್ತು. ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.