Select Your Language

Notifications

webdunia
webdunia
webdunia
webdunia

ಗ್ರಾಮ ಪಂಚಾಯಿತಿಗಳು ನೀಡುವ 'ಈ-ಸ್ವತ್ತು' ಉಪಯೋಗವೇನು?

ಗ್ರಾಮ ಪಂಚಾಯಿತಿಗಳು ನೀಡುವ 'ಈ-ಸ್ವತ್ತು' ಉಪಯೋಗವೇನು?
bangalore , ಶನಿವಾರ, 4 ಡಿಸೆಂಬರ್ 2021 (20:02 IST)
ಗ್ರಾಮಸ್ಥರು ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವ ತಮ್ಮ ಆಸ್ತಿಗಳನ್ನು ಇ-ಸ್ವತ್ತು ಮಾಡಿಸಿ ವಿಶಿಷ್ಟ ಸಂಖ್ಯೆಯನ್ನು ಪಡೆದುಕೊಳ್ಳಬಹುದು.
 
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ನೋಂದಣಿ ವೇಳೆ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ `ಈ-ಸ್ವತ್ತು' ಎಂಬ ತಂತ್ರಾಂಶವನ್ನು ರೂಪಿಸಿದೆ.
 
ನೂತನ ನಿಯಮದ ಪ್ರಕಾರ `ಈ-ಸ್ವತ್ತು' ತಂತ್ರಾಂಶ ಬಳಸಿ ಆನ್‌ಲೈನ್ ಮೂಲಕ ವಿತರಿಸಿದ ನಮೂನೆ-9 ಮತ್ತು ನಮೂನೆ 11ನ್ನು ಮಾತ್ರ ಆಸ್ತಿ ನೋಂದಣಿಗೆ ಬಳಸಬಹುದು. ಕೈಬರಹದ ಮೂಲಕ ನೀಡುವ ಹಾಗೂ ಹಳೆ ಮಾದರಿಯ ನಮೂನೆ 9 ಹಾಗೂ ನಮೂನೆ 11 ಇನ್ನು ಮುಂದೆ ರದ್ದುಗೊಳ್ಳಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಿಳಿಸಿದೆ.
 
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (PDO):
 
ಪಿಡಿಒಗಳು ಡಿಜಿಟಲ್ ಸಹಿಯನ್ನು ಮಾತ್ರ ಹಾಕಲು ಅವಕಾಶ ಇರುವುದರಿಂದ ಹೆಚ್ಚಿನ ಅಕ್ರಮಗಳನ್ನು ತಡೆಯಲು ಸಾಧ್ಯ.
 
ಸರ್ಕಾರ ಶುಲ್ಕ ಕೇವಲ 50 ರೂಪಾಯಿಗಳು ಮಾತ್ರ.
 
ಸಾರ್ವಜನಿಕರು ಈ-ಸ್ವತ್ತು ದಾಖಲೆ ಮಾಡಿಸಿಕೊಂಡು ಉಪನೊoಣಾದಿಕಾರಿಗಳ ಕಚೇರಿಯಲ್ಲಿ ನಿಮ್ಮ ಆಸ್ತಿಯನ್ನು ನೊಂದಾಯಿಸಿಕೊಳ್ಳಬಹುದು.
 
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಆಸ್ತಿಯನ್ನು ಮಾರುವಾಗ ಅಥವ ಕೊಳ್ಳುವಾಗ ಈ-ಸ್ವತ್ತು ಕಡ್ಡಾಯ.
 
ವಿಶಿಷ್ಟ ಸಂಖ್ಯೆ:
 
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಡಿಜಿಟಲ್ ಸಹಿ:
 
ಈ-ಸ್ವತ್ತು ಜಾರಿಗೆ ಬರಲು ಕಾರಣ :
 
ಗ್ರಾಮಾಂತರ ಪ್ರದೇಶಗಳಲ್ಲಿ ಭೂಪರಿವರ್ತನೆ ಆದೇಶ ಇಲ್ಲದ ಹಾಗೂ ಬಡಾವಣೆ ನಕ್ಷೆ ಅನುಮೋದನೆ ಇಲ್ಲದ ಆಸ್ತಿಗಳ ಕಾನೂನುಬಾಹಿರ ನೋಂದಣಿಯನ್ನು ತಡೆಯುವ ಸಲುವಾಗಿ ವ್ಯವಸ್ಥೆ ರೂಪಿಸುವಂತೆ ಹೈಕೋರ್ಟ್ 2012ರ ಜುಲೈ 7ರಂದು ಆದೇಶ ನೀಡಿತ್ತು. ಇದರಿಂದ ಎಚ್ಚೆತ್ತ ಸರ್ಕಾರ, ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ರೂಪಿಸಲು ಪ್ರಧಾನ ಕಾರ್ಯದರ್ಶಿ ರಾಜೀವ ಶುಕ್ಲ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಿತ್ತು.
 
ಈ-ಸ್ವತ್ತು ನಲ್ಲಿ ಎರಡು ವಿಧ ನಮೂನೆ 9 ಹಾಗೂ ನಮೂನೆ 11.
 
ನಮೂನೆ 9:
 
ಕೃಷಿಯೇತರ ಭೂಮಿ ಮತ್ತು ಕಟ್ಟಡಕ್ಕೆ ತೆರಿಗೆ ನಿರ್ಧರಿಸಲು ಒಂದು ಪಟ್ಟಿಯನ್ನು ಸಿದ್ಧಗೊಳಿಸಿರುತ್ತದೆ. ಅದರ ಆಧಾರದಲ್ಲಿ ನಮೂನೆ 9ನ್ನು ಪಿಡಿಒ ನೀಡಬೇಕಾಗುತ್ತದೆ. ಅದರಲ್ಲಿ ಮಾಲೀಕನ ಹೆಸರು, ಭಾವಚಿತ್ರ, ಜಾಗದ ಸರ್ವೇ ನಂಬ್ರ, ಆಸ್ತಿಯ ವಿಸ್ತೀರ್ಣ ಮತ್ತಿತರ ವಿವರಗಳು, ಆಸ್ತಿಯ ಚಿತ್ರ, ಯಾವ ವಿಧದ ಆಸ್ತಿ, ಅದರ ಛಾಯಾಚಿತ್ರ, ಮತ್ತಿತರ ವಿವರಗಳನ್ನು ಪಿಡಿಒ ಭರ್ತಿ ಮಾಡಬೇಕಾಗುತ್ತದೆ.
 
ನಮೂನೆ 11ಬಿ:
 
ನಮೂನೆ 11ರಲ್ಲಿ ಕಟ್ಟಡ ತೆರಿಗೆಗಳ ಬೇಡಿಕೆ, ತೆರಿಗೆ ಪಾವತಿಯ ವಿವರ, ಆಸ್ತಿಯ ವಿವರ, ಆಸ್ತಿಯ ಛಾಯಾಚಿತ್ರ, ಮಾಲೀಕರ ಭಾವಚಿತ್ರ ಮತ್ತಿತರ ವಿವರಗಳನ್ನು ಪಿಡಿಒ ಭರ್ತಿ ಮಾಡಿ ಡಿಜಿಟಲ್ ಸಹಿ ನಮೂದಿಸಬೇಕಾಗುತ್ತದೆ.
 
ಈ- ಸ್ವತ್ತು ನಕಲು ದಾಖಲೆ ಇಲ್ಲಿ ಪಡೆದುಕೊಳ್ಳಬಹುದು,
 
 (e-swathu.kar.nic.in)
 
swathu.kar.nic.in/(S(https://e-ht0nkhi10cguufzp51er42vt))/Issue0fForm9/Frm_PublicSearchForm9.aspx
 
ದಯವಿಟ್ಟು ಲಂಚ ಕೊಡಬೇಡಿ.
 
ಈ ಅಸ್ತ್ರಗಳನ್ನು ಉಪಯೋಗಿಸಿ,
 
ಮಾಹಿತಿ ಹಕ್ಕು ಕಾಯ್ದೆ
 
ಭ್ರಷ್ಟಾಚಾರ ನಿಗ್ರಹ ದಳ (ACB)
 

Share this Story:

Follow Webdunia kannada

ಮುಂದಿನ ಸುದ್ದಿ

ಗೌರವ ಧನವನ್ನು 10 ಸಾವಿರ ರೂ.ಗೆ ಏರಿಸಿ, ಅನುದಾನ ಕೊಡಿ: ಪರಿಷತ್ ಅಭ್ಯರ್ಥಿಗಳ ಆಗ್ರಹ