Select Your Language

Notifications

webdunia
webdunia
webdunia
webdunia

ಗೌರವ ಧನವನ್ನು 10 ಸಾವಿರ ರೂ.ಗೆ ಏರಿಸಿ, ಅನುದಾನ ಕೊಡಿ: ಪರಿಷತ್ ಅಭ್ಯರ್ಥಿಗಳ ಆಗ್ರಹ

ಗೌರವ ಧನವನ್ನು 10 ಸಾವಿರ ರೂ.ಗೆ ಏರಿಸಿ, ಅನುದಾನ ಕೊಡಿ: ಪರಿಷತ್ ಅಭ್ಯರ್ಥಿಗಳ ಆಗ್ರಹ
bangalore , ಶನಿವಾರ, 4 ಡಿಸೆಂಬರ್ 2021 (19:58 IST)
ಗ್ರಾಮಪಂಚಾಯಿತಿ ಸದಸ್ಯರಿಗೆ ತಿಂಗಳಿಗೆ ನೀಡುತ್ತಿರುವ ಗೌರವ ಧನವನ್ನು 10ಸಾವಿರ ರೂ.ಗೆ ಏರಿಕೆ ಮಾಡಬೇಕು, ವರ್ಷಕ್ಕೆ ಪ್ರತಿಯೊಬ್ಬ ಸದಸ್ಯರಿಗೆ 10 ಲಕ್ಷ ರೂ ಅನುದಾನ ನೀಡುವುದು ಸೇರಿದಂತೆ ಹಲವಾರು ಸವಲತ್ತುಗಳನ್ನು ಸರ್ಕಾರ ಎಂದು ಮೈಸೂರು-ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ದ್ವಿಸದಸ್ಯ ಸ್ಥಾನಕ್ಕೆ ಅಭ್ಯರ್ಥಿಗಳು ಒಕ್ಕೂರಲಿನಿಂದ ಆಯ್ಕೆಯಾದರು.
ಶುಕ್ರವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿoದ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅಭ್ಯರ್ಥಿಗಳಾದ ಬಿಜೆಪಿಯ ಆರ್.ರಘು, ಕಾಂಗ್ರೆಸ್‌ನ ಡಾ.ಡಿ.ತಮ್ಮಯ್ಯ, ಜೆಡಿಎಸ್‌ನ ಸಿ.ಎನ್.ಮಂಜೇಗೌಡ ಹಾಗೂ ಕನ್ನಡ ಚಳುವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರು, ಗ್ರಾ.ಪಂ ಸದಸ್ಯರಿಗೆ ಮಾಸಿಕವಾಗಿ 1 ಸಾವಿರ ರೂ ಮಾತ್ರ ನೀಡುತ್ತಿರುವುದು ಹಾಗೂ ಅವರಿಗೆ ಯಾವುದೇ ಸವಲತ್ತುಗಳನ್ನು ನೀಡದಿರುವ ರಾಜ್ಯ ಸರ್ಕಾರಗಳ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಆರ್.ರಘು ಕೌಟಿಲ್ಯ ಮಾತನಾಡಿ, ಗ್ರಾಮಪಂಚಾಯಿತಿ ಸದಸ್ಯರಿಗೆ ಅಧಿಕಾರ ವ್ಯಾಪ್ತಿಗೆ ಅನುಗುಣವಾಗಿ ಸವಲತ್ತುಗಳು ಸಿಗಬೇಕು ಹಾಗಾದಾಗ ಮಾತ್ರ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಗೌರವ ಬರುತ್ತದೆ. ಕೇರಳ ರಾಜ್ಯದಲ್ಲಿ ಪ್ರತಿಯೊಬ್ಬ ಗ್ರಾ.ಪಂ ಸದಸ್ಯನಿಗೆ ಮಾಸಿಕವಾಗಿ 10ಸಾವಿರ ರೂ ಗೌರವ ಧನ ನೀಡಲಾಗುತ್ತದೆ. ವಾರ್ಷಿಕವಾಗಿ ಪ್ರತಿಯೊಬ್ಬ ಸದಸ್ಯರಿಗೂ 10ಲಕ್ಷರೂ ಅನುದಾನವನ್ನು ಖರ್ಚು ಮಾಡಲಾಗುತ್ತಿದೆ. ಅಲ್ಲದೇ ಸಾಲಸೌಲಭ್ಯವಾಗಿ ಬೈಕ್, ಮೊಬೈಲ್, ಉಚಿತ ಬಸ್ ಪಾಸ್, ಉಚಿತವಾಗಿ ಆರೋಗ್ಯ ವಿಮೆಯನ್ನು ನೀಡಲಾಗುತ್ತಿದೆ. ಅದೇ ಮಾದರಿಯನ್ನು ನಮ್ಮ ರಾಜ್ಯದಲ್ಲಿಯೂ ಜಾರಿಗೆ ತರಬೇಕಾಗಿದೆ. ವಿವಿಧ ನಿಗಮ ಮಂಡಳಿಗಳ ಯೋಜನೆಯಡಿ ಗ್ರಾಮಮಟ್ಟದಲ್ಲಿಯೇ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿದೆ. ನಾನು ಆಯ್ಕೆಯಾದರೆ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಪರವಾಗಿ ಧ್ವನಿಯಾಗುತ್ತೇನೆ ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಗೆ ಹೆಚ್ಚಿನ ಸೌಲಭ್ಯಗಳನ್ನು ದೊರಕಿಸಿಕೊಡಲು ಶ್ರಮಿಸುತ್ತೇನೆ ಎಂದು ಹೇಳಿದರು.
ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಮಾತನಾಡಿ, ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತರಿಗೆ ಮಾಸಿಕವಾಗಿ 6 ಸಾವಿರ ರೂ ಗೌರವ ಧನ ನೀಡಲಾಗುತ್ತಿದೆ. ಆದರೆ ಜನರಿಂದ ಆಯ್ಕೆಯಾದ ಗ್ರಾ.ಪಂ ಸದಸ್ಯರಿಗೆ ಕೇವಲ ಒಂದು ಸಾವಿರ ರೂ ಗೌರವ ಧನ ನೀಡುತ್ತಿರುವುದು ಸರಿಯಲ್ಲ, ಕನಿಷ್ಠ ಪಕ್ಷ ಅಂಗನವಾಡಿ ಕಾರ್ಯಕರ್ತಗೆ ನೀಡುವ ಗೌರವ ಧನವನ್ನಾದರೂ ನೀಡಬೇಕು, ವಾರ್ಷಿಕವಾಗಿ 10 ಲಕ್ಷರೂ ಅನುದಾನವನ್ನು ಪ್ರತಿಯೊಬ್ಬ ಸದಸ್ಯರಿಗೂ ಖರ್ಚು ಮಾಡಲು ನೀಡಬೇಕು. ರಸ್ತೆ, ಬೀದಿ ದೀಪ, ನೈರ್ಮಲ್ಯ ಸಮಸ್ಯೆ ನಿವಾರಿಸಲು ಸಾಕಷ್ಟು ಅನುದಾನ ನೀಡಬೇಕು, ಗ್ರಾಮಪಂಚಾಯಿತಿಯಲ್ಲಿ ಹೆಚ್ಚಾಗಿ ಯುವಕರೇ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಯುವಕರು ಕೆಲಸಕ್ಕಾಗಿ ಗ್ರಾಮಗಳಿಂದ ಗುಳೆ ಹೋಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಪಕ್ಷೇತರ ಅಭ್ಯರ್ಥಿಯಾದ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಮಾತನಾಡಿ,ನನ್ನಂತಹವನು ಶಾಸನ ಸಭೆಯಲ್ಲಿ ಇರಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವ ಚುನಾವಣೆ ಇದಾಗಿದೆ. ಗ್ರಾಮ ಪಂಚಾಯತಿ ಸದಸ್ಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ನೀಡುತ್ತಿರುವ ಗೌರವ ಧನ ಯಾತಕ್ಕೂ ಸಾಕಾಗುತ್ತಿಲ್ಲ. ಆದರೆ ಶಾಸಕರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಂಸದರು ಆಕಾಶಕ್ಕೂ ಭೂಮಿಗೂ ಮಧ್ಯದಲ್ಲಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರಿಗೆ 5 ಸಾವಿರ ಗೌರವ ಧನ ಕೊಟ್ಟರೆ ಸಾಕು. ಚುನಾವಣೆಯಲ್ಲಿ ಒಂದೇ ಓಟ್ ಕೊಡಿ ಎನ್ನುತ್ತಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳು ಕೇಳುತ್ತಿರುವ ಒಂದು ಓಟಿನ ಜೊತೆಗೆ, ಎರಡನೇ ಓಟನ್ನು ವಾಟಾಳ್ ನಾಗರಾಜ್ ಗೆ ಕೊಡಿಸಿ ಎಂದು ಹೇಳಿದರು.
ಅವರ ಮಾತಿಗೆ ಉಳಿದ ಮೂವರು ಅಭ್ಯರ್ಥಿಗಳು ನಕ್ಕರು.
ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಮಾತನಾಡಿ, ನನಗದು ಮೊದಲನೇ ಚುನಾವಣೆ, ಕಾಂಗ್ರೆಸ್ ಪಕ್ಷದ ಸಾಧನೆ ಗುರ್ತಿಸಿ ಮತ ನೀಡಿ ಎಂದು ಮನವಿ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಹಣದ ಖರ್ಚು ವೆಚ್ಚಗಳಿಲ್ಲದೇ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆಗಿರುವ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸಿದರು. ಸಿದ್ದರಾಮಯ್ಯ ಸರ್ಕಾರದ ಅವಧಿಯ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಬಹುದಾಗಿದೆ. ಈ ಬಾರಿಯ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ನಗರಕಾರ್ಯದರ್ಶಿ ರಂಗಸ್ವಾಮಿ ಅವರನ್ನು ಭೇಟಿ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನೂತನ ಪೊಲೀಸ್ ಠಾಣೆ ಸಿಎಂಯಿಂದ ಉದ್ಘಾಟನೆ