Select Your Language

Notifications

webdunia
webdunia
webdunia
webdunia

ಡೆತ್‍ನೋಟ್ ಬರೆದಿಟ್ಟು ಫೈನಾನ್ಸಿಯರ್‍ವೊಬ್ಬರು ತಮ್ಮ ವೆಲ್ಡಿಂಗ್‍ಶಾಪ್‍ನಲ್ಲಿ ನೇಣು

ಡೆತ್‍ನೋಟ್ ಬರೆದಿಟ್ಟು ಫೈನಾನ್ಸಿಯರ್‍ವೊಬ್ಬರು ತಮ್ಮ ವೆಲ್ಡಿಂಗ್‍ಶಾಪ್‍ನಲ್ಲಿ ನೇಣು
bangalore , ಶುಕ್ರವಾರ, 3 ಡಿಸೆಂಬರ್ 2021 (20:34 IST)
ಹಣಕಾಸು ವಿಚಾರದ ಸಂಬಂಧ ಡೆತ್‌ನೋಟ್ ಬರೆದಿಟ್ಟು ಫೈನಾನ್ಸಿಯರ್ವೊಬ್ಬರು ತಮ್ಮ ವೆಲ್ಡಿಂಗ್‌ಶಾಪ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೆÇಲೀಸ್ ನಿಲ್ದಾಣದಲ್ಲಿ ನಡೆದಿದೆ. 
ತುಮಕೂರು ಮೂಲದಿಂದ ಬಂದು ತಲಘಟ್ಟಪುರದಲ್ಲಿ ನೆಲೆಸಿದ್ದ ರಾಜಣ್ಣ (49) ಆತ್ಮಹತ್ಯೆ ಮಾಡಿಕೊಂಡವರು. ಮೃತರ ಪತ್ನಿ ಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ನಿರಂಜನ್, ಮಂಜುನಾಥ್ ಹಾಗೂ ಗುಣ ಎಂಬುವವರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಆರೋಪಿಗಳ ಮೊಬೈಲ್ ನಂಬರ್ ಪಡೆದು ಟ್ರೇಸ್ ಮಾಡಲಾಗುತ್ತಿದೆ ಎಂದು ಪೆÇಲೀಸರು ತಿಳಿಸಿದರು. 
ರಾಜಣ್ಣ ಯಲಚೇನಹಳ್ಳಿಯಲ್ಲಿ ಫ್ಯಾಬ್ರಿಕೇಶನ್ ವೆಲ್ಡಿಂಗ್ ಶಾಪ್ ನಡೆಸುತ್ತಿದ್ದರು. ಹತ್ತು ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದರು. ಸಾಲದ ರೂಪದಲ್ಲಿ ಕೆಲವರಿಗೆ ಹಣ ನೀಡಿದ್ದರು. ಆದರೆ, ಈ ಹಣ ವಾಪಸ್ ಬಂದಿರಲಿಲ್ಲ. ಅಲ್ಲದೆ, ಚೀಟಿ ವ್ಯವಹಾರದಲ್ಲೂ ನಷ್ಟದಲ್ಲಿದ್ದರು ಎನ್ನಲಾಗಿದೆ. ಹೀಗಾಗಿ, ಕೆಲವರಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದರು. ಸಾಲ ಕೊಟ್ಟವರು ಹಣ ನೀಡುವಂತೆ ಒತ್ತಡ ಹಾಕುತ್ತಿದ್ದರು. ಹೀಗಾಗಿ, ಸಾಲಗಾರರ ಒತ್ತಡ ತಾಳಲಾರದೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ಸಿಸಿಬಿಯಲ್ಲೂ ದೂರು:
ರಾಜಣ್ಣ ಎಂಟು ಲಕ್ಷ ರೂ.ಗಳನ್ನು ನಿರಂಜನ್ ಎಂಬವರಿಗೆ ನೀಡಬೇಕಿತ್ತು. ಸಕಾಲಕ್ಕೆ ಹಣ ಕೊಡದಿದ್ದಾಗ ನಿರಂಜನ್ ಎಂಬವರು ರಾಜಣ್ಣನ ವಿರುದ್ಧ ಸಿಸಿಬಿ ಪೆÇಲೀಸರಿಗೂ ದೂರು ನೀಡಿದ್ದರು. ಈ ಸಂಬಂಧ ರಾಜಣ್ಣ ಸಿಸಿಬಿ ಪೆÇಲೀಸರ ವಿಚಾರಣೆಗೆ ಒಳಗಾಗಿದ್ದರು. ಇದೆಲ್ಲದರ ನಡುವೆ ಗುಣ ಹಾಗೂ ಮಂಜುನಾಥ್ ಎಂಬವರು ತಮಗೆ ಹಣ ಕೊಡಬೇಕು ಎಂದು ಆರೋಪಿಸಿದ್ದರು. ಇವರು ಕೂಡ ಸಿಬಿ ಮೊರೆ ಹೋಗಿದ್ದರು. ಇದೆಲ್ಲದರಿಂದ ಮನನೊಂದು ರಾಜಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಅಸಲಿಗೆ ನಿರಂಜನ್ ಎಂಬವರಿಗೆ ಮಾತ್ರ ರಾಜಣ್ಣ ಹಣ ನೀಡಬೇಕಾಗಿತ್ತೆಂದು ಬ್ಯಾಂಕ್ ಎಂದು ಪೆÇಲೀಸರು ಪ್ರಕಟಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯಗ್ರಹಣ ಸಂದರ್ಭದಲ್ಲಿ ಏನು ಮಾಡಬೇಕು, ಏನು ಮಾಡಬಾರದು ?