Select Your Language

Notifications

webdunia
webdunia
webdunia
webdunia

ಸವದತ್ತಿ ಯಲ್ಲಮ್ಮನ ಮುಂದೆ ಹೀಗೇನಾ ನಡ್ಕೋಳ್ಳೋದು: ಸಿದ್ದರಾಮಯ್ಯನವರಿಗೆ ಆರ್ ಅಶೋಕ್ ಕ್ಲಾಸ್

Chief Minister Siddaramaiah Rood Behaviour, Savadatti Yallamma Devi, Opposition Leader R Ashok,

Sampriya

ಬೆಂಗಳೂರು , ಸೋಮವಾರ, 14 ಅಕ್ಟೋಬರ್ 2024 (15:41 IST)
ಬೆಂಗಳೂರು:  ಸವದತ್ತಿ ಯಲ್ಲಮ್ಮ ದೇವಿ ಸನ್ನಿಧಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಡೆದುಕೊಂಡ ರೀತಿಗೆ ವಿಪಕ್ಷ ನಾಯಕ ಆರ್‌ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಭಾನುವಾರ ಸಿಎಂ ಸಿದ್ದರಾಮಯ್ಯ ಅವರು ಸವದತ್ತಿ ಯಲಮ್ಮನ ದೇವಿ ದರ್ಶನ ಪಡೆದಿದ್ದರು. ಈ ಸಂದರ್ಭದಲ್ಲಿ ನರೆದಿದ್ದ ಜನಸಮೂಹದಲ್ಲಿದ್ದ ವ್ಯಕ್ತಿಯೊಬ್ಬ ಸಿಎಂ ಪರ ಘೋಷಣೆ ಕೂಗಿದ್ದಾನೆ. ಸಾಹೇಬ್ರೆ,  ಮೂರನೇ ಡಿಸಿ ಬಂದ್ರು ಬೆಳಗಾವಿಯಲ್ಲಿ ಏನೂ ಕೆಲಸ ಆಗಿಲ್ಲ ಸಾಹೇಬ್ರೆ ಎಂದಿದ್ದಾನೆ. ಅದಕ್ಕೆ ಕೋಪಗೊಂಡ ಸಿಎಂ ಸಿದ್ಧರಾಮಯ್ಯ ಅವರು ಏಯ್ ಥೂ, ದೇವಸ್ಥಾನದಲ್ಲೂ ಇದೇ ಕೆಲಸನಾ ಎಂದು ಗರಂ ಆಗಿದ್ದಾರೆ.

ಪ್ರಜೆಗಳ ಬಗ್ಗೆ ಒಬ್ಬ ನಾಡಿನ ಮುಖ್ಯಮಂತ್ರಿ ನಡೆದುಕೊಂಡ ರೀತಿಗೆ ಆರ್‌ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಏಯ್ ಥೂ....

ಇದೇನಾ ಒಬ್ಬ ನಾಡಿನ ಮುಖ್ಯಮಂತ್ರಿ ಪ್ರಜೆಗಳನ್ನ ನಡೆಸಿಕೊಳ್ಳಬೇಕಾದ ರೀತಿ?

ಇದೇನಾ ಬಡವರು, ರೈತರು ಮೇಲೆ ಒಬ್ಬ ಮುಖ್ಯಮಂತ್ರಿಗೆ ಇರಬೇಕಾದ ಸಹನೆ, ಸಹಾನುಭೂತಿ, ಸಂವೇದನೆ?

ಇದೇನಾ ಕಷ್ಟ ಹೇಳಿಕೊಳ್ಳಲು ಬಂದವರಿಗೆ ಒಬ್ಬ ಮುಖ್ಯಮಂತ್ರಿ ಸ್ಪಂದಿಸುವ ಪರಿ?

ತಾಯಿ ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲೇ ಇಂತಹ ದುರ್ನಡತೆ ಪ್ರದರ್ಶನ ಮಾಡಿದ್ದಾರಲ್ಲ, ಆ ತಾಯಿ ಯಲ್ಲಮ್ಮ ಮೆಚ್ಚುತ್ತಾಳಾ?

ಅದು ಹೋಗಲಿ, ಇಂತಹ ದುರ್ನಡತೆಯನ್ನ ಮುಖ್ಯಮಂತ್ರಿಗಳ 'ಆತ್ಮಸಾಕ್ಷಿ'ಯಾದರೂ ಒಪ್ಪುತ್ತಾ?

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್: ಆರ್ ಅಶೋಕ್ ಟೀಕೆ