Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಆಡಳಿತಕ್ಕೆ ಗ್ರಹಣ ಹಿಡಿದಿದೆ: ಆರ್‌ ಅಶೋಕ್

MUDA Scam, Chief Minister Siddaramaiah, Opposition Leader R Ashok

Sampriya

ಬೆಂಗಳೂರು , ಸೋಮವಾರ, 7 ಅಕ್ಟೋಬರ್ 2024 (17:05 IST)
ಬೆಂಗಳೂರು: ಹಗರಣಗಳ ಸುಳಿಯಲ್ಲಿ ಸಿಲುಕಿ ಆತಂತ್ರವಾಗಿರುವ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತಕ್ಕೆ ಗ್ರಹಣ ಹಿಡಿದಿದೆ, ವಿಧಾನಸೌಧ, ವಿಕಾಸಸೌಧಗಳಲ್ಲಿ ಸೂತಕದ ವಾತಾವರಣ ಆವರಿಸಿಕೊಂಡಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಹೇಳಿದ್ದಾರೆ.

ಮುಡಾ ಹಗರಣ ಬೆಳಕಿಗೆ ಬಂದ್ಮೇಲೆ ರಾಜ್ಯದಲ್ಲಿ ಆಡಳಿತ ವ್ಯವ ಸ್ಥೆ ಕುಸಿಯುತ್ತಿದೆ ಎಂಬುದಕ್ಕೆ ಈಚೆಗೆ  ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಸಂಪುಟ ಸಭೆ ಇರುವ ದಿನ ಹೊರತುಪಡಿಸಿ, ಉಳಿದ ದಿನ ಸಚಿವರು ಆಗಮಿಸುವುದೇ ವಿರಳವಾಗಿದೆ ಎಂಬ ವಿಚಾರವಾಗಿ ಅವರು ಫೋಸ್ಟ್ ಹಂಚಿಕೊಂಡಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ಫೋಸ್ಟ್ ಹಾಕಿದ್ದಾರೆ.

ಹಗರಣಗಳ ಸುಳಿಯಲ್ಲಿ ಸಿಲುಕಿ ಆತಂತ್ರವಾಗಿರುವ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತಕ್ಕೆ ಗ್ರಹಣ
ಹಿಡಿದಿದೆ, ವಿಧಾನಸೌಧ, ವಿಕಾಸಸೌಧಗಳಲ್ಲಿ ಸೂತಕದ ವಾತಾವರಣ ಆವರಿಸಿಕೊಂಡಿದೆ.

ರಾಜ್ಯದ ಆರೂವರೆ ಕೋಟಿ ಕನ್ನಡಿಗರ ಕಲ್ಯಾಣಕ್ಕಾಗಿ ಶ್ರಮಿಸಬೇಕಾದ ಅಧಿಕಾರಶಾಹಿ ವ್ಯವಸ್ಥೆ ಸುಭದ್ರ ಸರ್ಕಾರವಿಲ್ಲದೆ, ಸದೃಢ ನೇತೃತ್ವವಿಲ್ಲದೆ ಅನಾಥವಾಗಿದೆ. ಗೊತ್ತು ಗುರಿಯಿಲ್ಲದ ಈ ಸರ್ಕಾರ ಸತ್ತಿದೆಯೋ, ಬದುಕಿದೆಯೋ ಎಂದು ಅರ್ಥವಾಗದ ಕನ್ನಡಿಗರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ತಪ್ಪಿಗೆ ದಿನನಿತ್ಯ ಪಶ್ಚಾತಾಪ ಪಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಟೆಂಪಲ್ ರನ್ ಮಾಡಿದ ಡಿಕೆ ಶಿವಕುಮಾರ್