Select Your Language

Notifications

webdunia
webdunia
webdunia
webdunia

ಯಾದಗಿರಿಗೆ ಅಂಟುತ್ತಾ ಕಲಬುರಗಿ ಕೊರೊನಾ ನಂಟು?

ಯಾದಗಿರಿಗೆ ಅಂಟುತ್ತಾ ಕಲಬುರಗಿ ಕೊರೊನಾ ನಂಟು?
ಯಾದಗಿರಿ , ಭಾನುವಾರ, 26 ಏಪ್ರಿಲ್ 2020 (22:37 IST)
ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಲಬುರಗಿ ಜಿಲ್ಲೆಯಿಂದ ಇದೀಗ ಯಾದಗಿರಿಗೆ ಕೋವಿಡ್ -19 ಹರಡುತ್ತಾ ಅನ್ನೋ ಪ್ರಶ್ನೆಗಳು ಕೇಳಿಬರುತ್ತಿವೆ.

ಕೋವಿಡ್-19 ಸೋಂಕಿತ ಕಲಬುರಗಿ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಎನ್ನಲಾದ ವ್ಯಕ್ತಿಯ ದ್ವಿತೀಯ ಸಂಪರ್ಕದಲ್ಲಿದ್ದ ಯಾದಗಿರಿ ಜಿಲ್ಲೆಯ ಇಬ್ಬರನ್ನು ಪತ್ತೆ ಹಚ್ಚಿದ್ದು, ಇವರಲ್ಲಿ ರೋಗದ ಗುಣಲಕ್ಷಣಗಳು ಇಲ್ಲದ ಕಾರಣ ಹೋಮ್ ಕ್ವಾರಂಟೈನ್‍ನಲ್ಲಿರಿಸಲಾಗಿದೆ. ಉಳಿದವರ ಪತ್ತೆ ಕಾರ್ಯ ತೀವ್ರಗತಿಯಲ್ಲಿ ನಡೆದಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಅವರು ತಿಳಿಸಿದ್ದಾರೆ.

ಕಲಬುರಗಿ ನಗರದ ಕೋವಿಡ್-19, ಪಿ-413 ಪೀಡಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎನ್ನಲಾದ ಕಲಬುರಗಿ ನಿವಾಸಿಯನ್ನು ಪತ್ತೆ ಹಚ್ಚಿದ ಅಲ್ಲಿನ ತಂಡ ಗಂಟಲಿನ ದ್ರವದ ಮಾದರಿಯನ್ನು (ಸ್ವಾಬ್ ಸ್ಯಾಂಪಲ್) ಕೋವಿಡ್-19 ಪರೀಕ್ಷೆಗಾಗಿ ರವಾನಿಸಿರುತ್ತಾರೆ. ಈ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಯು ಯಾದಗಿರಿ ಜಿಲ್ಲೆಯಲ್ಲಿ ಆಪ್ಟಿಕಲ್ ಅಂಗಡಿ ಹೊಂದಿದ್ದಾನೆ.

ಏಪ್ರಿಲ್ 15ರಿಂದ 22ರ ವರೆಗೆ ಆಪ್ಟಿಕಲ್ ಶಾಪ್ ತೆರೆದಿರುತ್ತಾರೆ. ಈ ಸಂದರ್ಭದಲ್ಲಿ ಸದರಿಯವರಿಗೆ ದ್ವಿತೀಯ ಸಂಪರ್ಕದಲ್ಲಿದ್ದವರು ಎನ್ನಲಾದ ಇಬ್ಬರನ್ನು ಯಾದಗಿರಿ ಜಿಲ್ಲೆಯ ಸಂಪರ್ಕ ಪತ್ತೆ ಹಚ್ಚುವ ತಂಡ ಗುರುತಿಸಿದ್ದು, ಇವರ ಜ್ವರ ತಪಾಸಣೆ ಮಾಡಲಾಗಿದೆ. ಯಾವುದೇ ರೋಗ ಲಕ್ಷಣಗಳು ಕಂಡು ಬರದೆ ಇರುವುದರಿಂದ ಹೋಮ್ ಕ್ವಾರಂಟೈನ್‍ನಲ್ಲಿ ಅವಲೋಕನೆಗಾಗಿ ಇರಿಸಲಾಗಿರುತ್ತದೆ. ಇನ್ನುಳಿದವರನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಪರೀಕ್ಷೆಗೆ ಹೋದ ಆಶಾ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನ