ಲಾಕ್ ಡೌನ್ ವಿನಾಯಿತಿ ಮೇ 3 ರಿಂದ ನೀಡುವುದರಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗಬಹುದು.
									
										
								
																	
ಕೋವಿಡ್ -19 ರೋಗ ನಿಯಂತ್ರಣಕ್ಕೆ ಬರುತ್ತಿದೆ ಎಂದು ಉದಾಸೀನತೆ ತೋರುವಂತಿಲ್ಲ. ಪ್ರತಿಯೊಬ್ಬರೂ ಹೆಚ್ಚು ಜಾಗ್ರತೆ ವಹಿಸಬೇಕು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ್‍ಭಾಸ್ಕರ್ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
									
			
			 
 			
 
 			
					
			        							
								
																	ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಡನೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು,  ಬೆಂಗಳೂರಿನಲ್ಲಿ ಕೇವಲ ಒಬ್ಬ ವ್ಯಕ್ತಿಯಿಂದ 24 ಜನರಿಗೆ ಕೊರೋನಾ ಸೋಂಕು ಹರಡಿದೆ. ಇದೇ ರೀತಿ ಮುಂದುವರೆದರೆ ಪ್ರಕರಣಗಳು ಹೆಚ್ಚಾಗುತ್ತವೆ. ಹಾಗಾಗಿ ಕೊರೋನಾ ಸೋಂಕಿತರೊಡನೆ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚುವುದು ಹಾಗೂ ಅವರ ಮೇಲೆ ನಿಗಾವಹಿಸುವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ ಎಂದಿದ್ದಾರೆ.
									
										
								
																	ಲಾಕ್ ಡೌನ್ ಮುಗಿದ ನಂತರ ಹೊರ ರಾಜ್ಯಗಳಿಂದ ಹಾಗೂ ಹೊರದೇಶಗಳಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಹಾಗಾಗಿ ಅವರನ್ನೆಲ್ಲಾ ಕ್ವಾರಂಟೈನ್‍ನಲ್ಲಿ ಇಡಬೇಕಾಗುತ್ತದೆ. ಕ್ವ್ವಾರಂಟೈನ್ ವ್ಯಕ್ತಿಗಳ ಮೇಲೆ ನಿಗಾ ಹಾಗೂ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಲು ಜಿಯೋ ಫೆನ್ಸಿಂಗ್ ಅನ್ನು ಕಾಲ್ ಸೆಂಟರ್‍ಗಳಿಗೆ ಲಿಂಕ್ ಮಾಡಿ.
									
											
							                     
							
							
			        							
								
																	ಪ್ರಥಮ ಹಾಗೂ ದ್ವತೀಯ ಸಂಪರ್ಕ ಹೊಂದಿದವರು ಜಿಯೋ ಫೆನ್ಸಿಂಗ್ ದಾಟಿದ ಕೂಡಲೇ ಅವರಿಗೆ ಕರೆ ಹೋಗುವಂತೆ ವ್ಯವಸ್ಥೆ ಮಾಡಿ. ಈ ರೀತಿ ಮಾಡಿದರೆ ಸುಲಭವಾಗಿ ಕಾರ್ಯ ಸಾಧಿಸಬಹುದು ಎಂದರಲ್ಲದೇ ಈ ವ್ಯವಸ್ಥೆಯನ್ನು ಮುಂದಿನ ಮೂರು ದಿನಗಳಲ್ಲಿ ಹೆಚ್ಚು ಕೊರೋನಾ ಪ್ರಕರಣಗಳು ಇರುವ ಜಿಲ್ಲೆಗಳಲ್ಲಿ ಅಳವಡಿಸಿ ಎಂದು ಅವರು ಹೇಳಿದರು.