Select Your Language

Notifications

webdunia
webdunia
webdunia
webdunia

ಎಂಎಲ್ ಸಿ ಪುತ್ರನ ವಿರುದ್ಧ ಎಫ್ ಐ ಆರ್ : ಕೊರೊನಾ ವಾರಿಯರ್ಸ್, ಪರ್ತಕರ್ತರ ಮೇಲೆ ಹಲ್ಲೆ

ಪತ್ರಕರ್ತರ ಮೇಲೆ ಹಲ್ಲೆ
ಮಂಡ್ಯ , ಶನಿವಾರ, 25 ಏಪ್ರಿಲ್ 2020 (14:30 IST)
ಕೊರೊನಾ ವೈರಸ್ ಪರೀಕ್ಷೆ ಮಾಡಿಕೊಳ್ಳುತ್ತಿದ್ದ ಪರ್ತಕರ್ತರ ಮೇಲೆ ಹಲ್ಲೆ ನಡೆಸಿದ ವಿಧಾನ ಪರಿಷತ್ ಸದಸ್ಯನ ಪುತ್ರನ ವಿರುದ್ಧ ಕ್ರಮಕ್ಕೆ ಪತ್ರಕರ್ತರು ಆಗ್ರಹ ಮಾಡಿದ್ದಾರೆ.

ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮತ್ತು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹಾಗೂ ಅವರ ಪುತ್ರ.
webdunia

ಇವರಿಬ್ಬರ ವಿರುದ್ಧ ಕ್ರಮ ಕೈಗೊಂಡು ಎಫ್ ಐ ಆರ್ ದಾಖಲು ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಹಾಗೂ ಎಸ್ಪಿ ಪರಶುರಾಮ್ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ದೂರು ನೀಡಿದ್ದಾರೆ.

ಕೊರೊನಾ ವಾರಿಯರ್ಸ್ ಗಳ ಮೇಲೂ ಎಂಎಲ್ ಸಿ ಪುತ್ರ ದೌರ್ಜನ್ಯ ಎಸಗಿದ್ದಾನೆ. ಹೀಗಾಗಿ ಎಂಎಲ್ ಸಿ ಕೆ.ಟಿ.ಶ್ರೀಕಂಠೇಗೌಡ ಹಾಗೂ ಆತನ ಮಗನ ವಿರುದ್ಧ ಕೇಸ್ ದಾಖಲು ಮಾಡಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಟೆಸ್ಟ್ ಮಾಡಬೇಡಿ ಎಂದ MLC : ಎಂಎಲ್ ಸಿ ಮಗನ ಬಂಧನ