Select Your Language

Notifications

webdunia
webdunia
webdunia
webdunia

ಇಂಗ್ಲಿಷ್ ನಾಮಫಲಕಕ್ಕೆ ತಕ್ಕ ಶಾಸ್ತಿ ಆಗಿದ್ದೆಲ್ಲಿ?

ಇಂಗ್ಲಿಷ್ ನಾಮಫಲಕಕ್ಕೆ ತಕ್ಕ ಶಾಸ್ತಿ ಆಗಿದ್ದೆಲ್ಲಿ?
ಯಾದಗಿರಿ , ಗುರುವಾರ, 21 ನವೆಂಬರ್ 2019 (19:54 IST)
ಆಂಗ್ಲಭಾಷೆಯಲ್ಲಿ ಬರೆಸಲಾಗಿದ್ದ ನಾಮಫಲಕಗಳನ್ನು ತೆರವುಗೊಳಿಸಿ ಕನ್ನಡ ಪ್ರೇಮ ಮೆರೆದ ಘಟನೆ ನಡೆದಿದೆ.

ಯಾದಗಿರಿ ತಾಲೂಕಿನ ಗುರುಮಠಕಲ್ ಪಟ್ಟಣದ ಮುಖ್ಯರಸ್ತೆ ಸೇರಿದಂತೆ ಎಲ್ಲಾ ಕಡೆ ಅಂಗಡಿ, ಮುಂಗಟ್ಟು ಸಂಘ ಸಂಸ್ಥೆಗಳ ಇಂಗ್ಲೀಷ್ ನಾಮಫಲಕಗಳನ್ನು ತೆಗೆಸಲಾಗಿದೆ.

ಕನ್ನಡದಲ್ಲಿ ನಾಮಫಲಕಗಳನ್ನು ಅಳವಡಿಸುವಂತೆ ಪುರಸಭೆ ಮುಖ್ಯಾಧಿಕಾರಿ ಜೀವನಕುಮಾರ ಕಟ್ಟೀಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಹಿರಿಯ ಆರೋಗ್ಯ ನಿರೀಕ್ಷಕ ರಾಮುಲು ಗೌಡ ಮಾತನಾಡಿ, ಕಳೆದ ಒಂದು ವಾರದಿಂದ ತಮ್ಮ ತಮ್ಮ ಅಂಗಡಿಗಳ ನಾಮಫಲಕಗಳನ್ನು 6೦:4೦ ಅನುಪಾತದಲ್ಲಿ ಕನ್ನಡ ಮತ್ತು ಇತರೆ ಭಾಷೆಯಲ್ಲಿ ನಾಮಫಲಕ ಅಳವಡಿಸಿಕೊಳ್ಳುವಂತೆ ಪ್ರಚಾರ ಮಾಡಲಾಗಿತ್ತು.

ಸರಕಾರದ ಆದೇಶದ ಪ್ರಕಾರ ಪ್ರತಿಯೊಂದು ನಾಮಫಲಕವು ಕನ್ನಡದಲ್ಲಿರಬೇಕು. ಇತರೆ ಭಾಷೆಗಳನ್ನು ಬಳಕೆ ಮಾಡುವ ಸಂದರ್ಭದಲ್ಲಿ ಆ ಭಾಷೆಯಲ್ಲಿರುವ ಹೆಸರು ಮತ್ತು ಪದಗಳು ಕನ್ನಡ ಆವೃತ್ತಿಯ ಕೆಳಗೆ ಬರಬೇಕು. ಕನ್ನಡ ಭಾಷೆ ಹೆಚ್ಚು ಎದ್ದು ಕಾಣುವಂತೆ ಇರಬೇಕು. ಹೆಚ್ಚಿನ ಸ್ಥಳಾವಕಾಶವನ್ನು ಕನ್ನಡಕ್ಕೆ ಕಲ್ಪಿಸಬೇಕು ಅಂತ ಹೇಳಿದರು. ಈ ಮೂಲಕ ಗಡಿನಾಡಿನ ಈ ಭಾಗವು ಕನ್ನಡಮಯವಾಗುವಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕೆಂದು ಕೋರಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಅನರ್ಹ ಶಾಸಕನ ಜನ್ಮ ಜಾಲಾಡಿದ ಸಿದ್ದರಾಮಯ್ಯ