Publish Date: Mon, 30 Dec 2019 (06:23 IST)
Updated Date: Mon, 30 Dec 2019 (06:24 IST)
ಮುಂಬೈ : ಪತಿಗೆ ಹೆತ್ತವರನ್ನು ನೋಡಿಬರುವುದಾಗಿ ಸುಳ್ಳು ಹೇಳಿದ ಪತ್ನಿ ತನ್ನ ಲವರ್ ಮನೆಗೆ ತೆರಳಿ ಬಳಿಕ ಪತಿಯಿಂದ ಹಲ್ಲೆಗೊಳಗಾದ ಘಟನೆ ಮುಂಬೈನಲ್ಲಿ ನಡೆದಿದೆ.
ತನ್ನ ಹೆತ್ತವರನ್ನು ನೋಡಿಬರುವುದಾಗಿ ಹೇಳಿ ಹೋದ ಪತ್ನಿ ಗೆ ಪತಿ ಕಾಲ್ ಮಾಡಿದರೆ ಆಕೆ ಕಾಲ್ ರಿಸೀವ್ ಮಾಡದಿದ್ದಾಗ ಆತಂಕಗೊಂಡ ಪತಿ ಆಕೆಗಾಗಿ ಹುಡುಕಾಟ ನಡೆಸಿದ್ದಾನೆ. ಬಳಿಕ ಆಕೆ ತನ್ನ ಲವರ್ ಮನೆಯಲ್ಲಿ ಇರುವ ವಿಚಾರ ತಿಳಿದ ಪತಿ ತನ್ನ ಸ್ನೇಹಿತರನ್ನು ಕರೆಸಿಕೊಂಡು ಇಬ್ಬರಿಗೂ ಥಳಿಸಿದ್ದಾರೆ.
ಈ ಘಟನೆಯಲ್ಲಿ ಪತ್ನಿಯ ಲವರ್ ಗೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿ ಬಳಿಕ ರಿಲೀಸ್ ಮಾಡಿದ್ದಾರೆ ಎನ್ನಲಾಗಿದೆ.