Publish Date: Wed, 27 Mar 2019 (21:04 IST)
Updated Date: Wed, 27 Mar 2019 (21:06 IST)
ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಆತುರವಾಗಿ ತೆರಳುತ್ತಿದ್ದಾಗ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದು, ಇನ್ನೊಬ್ಬ ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ನಂಜನಗೂಡು ತಾಲೂಕಿನ ಮಾಕನಪುರ ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದೆ.
ಬೈಕ್ ನ್ನು ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ವಿದ್ಯಾಥಿ೯ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಬ್ಬರಿಗೆ ತೀವ್ರ ಗಾಯವಾಗಿವೆ. ಹಗಿನವಾಳು ಗ್ರಾಮದ ಮಣಿಕಂಠ(16) ಸಾವನ್ನಪ್ಪಿರುವ ವಿದ್ಯಾಥಿ೯ಯಾಗಿದ್ದು, ದಶ೯ನ್ (16)ಗಾಯಗೊಂಡಿದ್ದು, ಚಿಕಿತ್ಸೆಗಾಗಿ ನಂಜನಗೂಡಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ಹಗಿನವಾಳು ಗ್ರಾಮದಲ್ಲಿ ಸಕಾ೯ರಿ ಶಾಲೆಯಲ್ಲಿ ಓದುತ್ತಿದ್ದು, ಕಸುವಿನಹಳ್ಳಿ ಪರೀಕ್ಷಾ ಕೇಂದ್ರವಾಗಿತ್ತು. ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಘಟನೆ ನಡೆದಿದೆ.