Publish Date: Thu, 07 Oct 2021 (20:16 IST)
Updated Date: Thu, 07 Oct 2021 (20:19 IST)
ವಿವಿಧ ಬೇಡಿಕೆ ಈಡೇರುಸುವಂತೆ ಒತ್ತಾಯಿಸಿ ಕಳೆದ ಏಪ್ರಿಲ್ನಲ್ಲಿ ಬಿಎಂಟಿಸಿ ನೌಕರರು ಮುಷ್ಕರ ನಡೆಸಿದ್ದರು. ಇದಾದ ಬಳಿಕ ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರರನ್ನು ನಿಗಮ ವಜಾ ಮಾಡಿತ್ತು. ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿದ್ದವು. ಕೊರೊನಾ ಸಮಯದಲ್ಲಿ ಒಂದೊತ್ತು ಊಟಕ್ಕೂ ಪರದಾಡುವಂತಾಗಿತ್ತು. ನಿಗಮದ ನಿರ್ಧಾರಕ್ಕೆ ಅನೇಕ ಕುಟುಂಬಗಳನ್ನು ಬೀದಿಗೆ ತಳ್ಳಿತ್ತು. ಇದೀಗ ಬಿಎಂಟಿಸಿಯ ಕೇಶವ್ ಎಂಬ ನೌಕರೊಬ್ಬರು ನಿಗಮದ ಈ ನಿರ್ಧಾರದಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂದಿರಾ ನಗರದ ಡಿಪೋ 6ರಲ್ಲಿ ಡಿಪೋ ಮ್ಯಾನೇಜರ್ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳು ಮುಂದಾಗಿದ್ದಾರೆ. ತಕ್ಷಣವೇ ಅವರನ್ನು ನಗರದ ಬೌರಿಂಗದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ. ತೀರಾ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದ ಕೇಶವ್ ಇಂದು ಸಾಯುವ ನಿರ್ಧಾರ ಮಾಡಿದ್ದರಂತೆ.