Select Your Language

Notifications

webdunia
webdunia
webdunia
webdunia

5 ನೇ ಮಹಡಿಯಿಂದ ಬಿದ್ದವರ ಕಥೆ ಏನಾಯ್ತು ಗೊತ್ತಾ?

5 ನೇ ಮಹಡಿಯಿಂದ ಬಿದ್ದವರ ಕಥೆ ಏನಾಯ್ತು ಗೊತ್ತಾ?
ಕಲಬುರಗಿ , ಮಂಗಳವಾರ, 11 ಡಿಸೆಂಬರ್ 2018 (15:01 IST)
ಅವರಿಬ್ಬರು ಕೂಲಿ ಕಾರ್ಮಿಕರು. ಕಟ್ಟಡ ನಿರ್ಮಾಣದಲ್ಲಿ ಕೆಲಸಮಾಡುತ್ತಿದ್ದ ಕೂಲಿಗಳು ತಮ್ಮದಲ್ಲದ ತಪ್ಪಿಗೆ ಬರೋಬ್ಬರಿ ಐದು ಮಹಡಿಗಳಿಂದ ಕೆಳಗೆ ಬಿದ್ದಿದ್ದಾರೆ. ಆಮೇಲೇನಾಯ್ತು?...

ಜಿಮ್ಸ್ ಆಸ್ಪತ್ರೆಯ ಐದನೇ ಮಹಡಿಯಿಂದ ಕೆಳಗೆ ಬಿದ್ದು ಇಬ್ಬರು ಕಾರ್ಮಿಕರು ದುರ್ಮರಣ ಕಂಡಿದ್ದಾರೆ. ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯ ಐದನೇ ಮಹಡಿಯಿಂದ ಬಿದ್ದು ದುರ್ಮರಣವಾಗಿದೆ. ಮೃತ ಕಾರ್ಮಿಕರು ಧರ್ಮನ್ (26),  ಪ್ರಶಾಂತ್ (21) ಆಗಿದ್ದಾರೆ.

ಮೃತ ಇಬ್ಬರು ಪಶ್ಚಿಮ ಬಂಗಾಳದ ಮೂಲದವರಾಗಿದ್ದಾರೆ. ಬೆಳಗ್ಗೆ 9 ಗಂಟೆಯ ಸುಮಾರಿಗೆ ಸಂಭವಿಸಿದ ದುರಂತದಲ್ಲಿ ಜಿಮ್ಸ್ ಆಸ್ಪತ್ರೆಯ ಐದನೇ ಮಹಡಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದ್ದ ಸಂದರ್ಭದಲ್ಲಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಬ್ರಹ್ಮಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಇದಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಇಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದವ ಭೀಕರವಾಗಿ ಸತ್ತುಬಿಟ್ಟ!