Select Your Language

Notifications

webdunia
webdunia
webdunia
webdunia

ಸತೀಶ್ ಜಾರಕಿಹೊಳಿ ಸಿಡಿಸಿದ ಹೊಸ್ ಬಾಂಬ್ ಏನು ಗೊತ್ತಾ?

ಸತೀಶ್ ಜಾರಕಿಹೊಳಿ ಸಿಡಿಸಿದ ಹೊಸ್ ಬಾಂಬ್ ಏನು ಗೊತ್ತಾ?
ಬೆಳಗಾವಿ , ಮಂಗಳವಾರ, 4 ಡಿಸೆಂಬರ್ 2018 (20:26 IST)
ಶ್ರೀರಾಮುಲು ಆಪ್ತ ಹಾಗೂ ದುಬೈ ಉದ್ಯಮಿ ನಡುವೆ ಬಹಿರಂಗಗೊಂಡ ಆಡಿಯೋ ಕ್ಲಿಪ್ ವಿಚಾರಕ್ಕೆ ಸಂಬಂಧಿಸಿದಂತೆ
ಬೆಳಗಾವಿಯಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಹೊಸ್ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿಗೆ ಹೋದ್ರೆ 7-8 ಜನ ಶಾಸಕರು ಹೋಗಬಹುದು. 25 ಜನ ಹೋಗಲ್ಲ ಎಂದಿದ್ದಾರೆ.
7-8 ಜನ ಶಾಸಕರಿಗೆ ಅಸಮಾಧಾನ ಇದೆ. ಆದರೆ ಅವರು ಪಕ್ಷ ಬಿಟ್ಟು ಹೋಗಲ್ಲ. 7-8 ಜನ ಹೋದ್ರೆ ಸರಕಾರಕ್ಕೆ ತೊಂದರೆ ಇಲ್ಲ ಸರ್ಕಾರ ಸೇಫ್ ಆಗಿರುತ್ತೆ ಎಂದು ಹೇಳಿದರು.

ಬಿಜೆಪಿಯವರು 6 ತಿಂಗಳಿನಿಂದಲೂ  ಆಮಿಷವೊಡ್ಡುತ್ತಲೇ ಬಂದಿದ್ದಾರೆ. ಅದಕ್ಕೆ ಹೆಚ್ಚಿನ ಮಹತ್ವ ಕೊಡೋದು ಬೇಡ.
ನಾನಂತೂ ಎಲ್ಲಿಯೂ ಹೋಗುವುದಿಲ್ಲ. ಹೀಗಾಗಿ ಇವುಗಳಿಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.

ಮುಂಬೈ ರೆಸಾರ್ಟ್ ಗೆ ಕೆಲ ಶಾಸಕರು ಹೋಗ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅದೇ ನಾನು ಹೇಳಿದ್ದೇನೆ ಕೆಲವರಿದ್ದಾರೆ.  ಆದರೆ ಖಂಡಿತವಾಗಿಯೂ ಅದು ಯಶಸ್ವಿಯಾಗೋದಿಲ್ಲ. ಅಧಿವೇಶನಕ್ಕೆ ಮುಂಚೆ ಸಚಿವ ಸಂಪುಟ ವಿಸ್ತರಣೆ  ಆದರೂ ಆಗಬಹುದು. ನಾನು ಸಚಿವ ಸ್ಥಾನ ಆಕಾಂಕ್ಷಿ ಅಲ್ಲ. ಒಂದೇ ಮನೆಯಲ್ಲಿ ಇಬ್ಬರಿಗೆ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ. ನಾನು ಶಾಸಕನಾಗಿದ್ದುಕೊಂಡೆ ಸಾಕಷ್ಟು ಪವರಫುಲ್ ಆಗಿದ್ದೇನೆ ಎಂದರು.  


Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ಫಲಾನುಭವಿಗಳಿಗೆ ಮಾಸಾಶನ ಮಂಜೂರು: ಉಪತಹಶೀಲ್ದಾರ ಅಮಾನತ್