Select Your Language

Notifications

webdunia
webdunia
webdunia
webdunia

ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ವಿಜಯೇಂದ್ರ ಹೇಳಿದ್ದೇನು?

ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ವಿಜಯೇಂದ್ರ ಹೇಳಿದ್ದೇನು?
ಬೆಂಗಳೂರು , ಬುಧವಾರ, 27 ಫೆಬ್ರವರಿ 2019 (14:25 IST)
ಪ್ರಧಾನಿಗೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಭಿನಂದಿಸಿದ ಬೆನ್ನಲ್ಲೇ ಆ ಹೇಳಿಕೆಯನ್ನು ಬಿಜೆಪಿ ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.

ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಹೇಳಿಕೆ  ನೀಡಿದ್ದು, ದೇಶದಲ್ಲಿನ ವಾತಾವರಣ ಬಿಜೆಪಿಗೆ ಪೂರಕವಾಗಿದೆ. ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರೇ ಹೇಳಿದ್ದಾರೆ ಎಂದಿದ್ದಾರೆ.

ಇನ್ನು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಎರಡು ದಿನಗಳ ಕಾಲ ಸಿಎಂ ಆಗಿದ್ರು. ಆ ನಂತರ ರಾಜಿನಾಮೆ ನೀಡುವ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಭಾಷಣ ಮಾಡುತ್ತ ಒಂದು ಮಾತು ಹೇಳಿದ್ರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20-22 ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು.

ಆ ಮೂಲಕ ನರೇಂದ್ರ ಮೋದಿ ಅವರ ಕೈಯನ್ನು ಬಲಪಡಿಸಬೇಕು ಎಂದು ಹೇಳಿದ್ರು. ಆ ನಿಟ್ಟಿನಲ್ಲಿ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ರು. ಹಾಗಾಗಿ ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮಾಡುತ್ತಿರುವುದರಲ್ಲಿ ನಮಗೆ ವಿಶ್ವಾಸ ಇದೆ ಎಂದರು. ಭಾರತದಲ್ಲಿ ವಾತಾವರಣ ಇವತ್ತು ಬಿಜೆಪಿಯ ಪರವಾಗಿ ಒಂದು ತರಹದ ಬಿರುಗಾಳಿ ಎದ್ದಿದೆ. ಇವತ್ತು ನರೇಂದ್ರ ಮೋದಿ ಅವರ ಮುಂದೆ ಯಾರು ಸರಿಸಾಟಿ ಇಲ್ಲ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

1 ಕೆಜಿ ಚಿನ್ನಾಭರಣ ವಶವಾಗಿದ್ದು ಎಲ್ಲಿ?