Publish Date: Tue, 26 Feb 2019 (16:38 IST)
Updated Date: Tue, 26 Feb 2019 (16:40 IST)
ಹಾವೇರಿ, ಧಾರವಾಡ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳ ಮೋದಿ ವಿಜಯ ಸಂಕಲ್ಪ ಯಾತ್ರೆಯ ಸಮಾವೇಶ ಹಾವೇರಿಯಲ್ಲಿ ನಡೆಯಿತು.
ಹಾವೇರಿ ನಗರದ ಮುನ್ಪಿಪಲ್ ಮೈದಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಸಮಾವೇಶಕ್ಕೆ ಚಾಲನೆ ನೀಡಿದ್ರು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬಿ. ಎಸ್. ವೈ, ಲೋಕಸಭಾ ಚುನಾವಣೆಗೆ ಕೇವಲ ಏಳು ವಾರಗಳು ಬಾಕಿ ಇವೆ. ಚುನಾವಣೆ ಮುಗಿಯುವವರೆಗೂ ಎಲ್ಲ ಕಾರ್ಯಕರ್ತರು 22 ಸ್ಥಾನ ಗೆಲ್ಲುವವರೆಗೂ ಮನೆಗೆ ಹೋಗಬಾರದು ಎಂದು ಮನವಿ ಮಾಡಿದ್ರು.
ಪ್ರಧಾನಿ ನರೇಂದ್ರ ಮೋದಿಗೆ ಸರಿಸಾಟಿಯಾದ ವ್ಯಕ್ತಿ ಇಲ್ಲ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯ ನರೇಂದ್ರ ಮೋದಿ ಪ್ರಧಾನಿ ಆಗುವುದು ಅಷ್ಟೇ ಸತ್ಯ ಎಂದ್ರು. ಕರ್ನಾಟಕದಿಂದ 22 ಸೀಟ್ ಗಳನ್ನು ಗೆಲ್ಲಿಸುವದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ರು.