ಇಡಿ, ಐಟಿ ವಿರುದ್ಧ ಕಾಂಗ್ರೆಸ್ ಮುಖಂಡರು ಮಾಡಿದ್ದೇನು?

ಗುರುವಾರ, 5 ಸೆಪ್ಟಂಬರ್ 2019 (19:23 IST)
ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಬಂಧನ ಖಂಡಿಸಿ ಹಾಗೂ ಇಡಿ ಮತ್ತು ಐಟಿ ಅಧಿಕಾರಿಗಳ ಕ್ರಮ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಿದೆ.

ಮಂಡ್ಯದ ನಾಗಮಂಗಲದಲ್ಲಿ ಕಾಂಗ್ರೆಸ್  ಮುಖಂಡರು ಪಟ್ಚಣದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ರು.
ಮಂಡ್ಯದ ನಾಗಮಂಗಲ  ಪಟ್ಚಣದ ಕಾಂಗ್ರೆಸ್ ಕಛೇರಿಯಿಂದ ಮೆರವಣಿಗೆ ಆರಂಭಿಸಿದ ಯೂಥ್ ಕಾಂಗ್ರೆಸ್  ಮುಖಂಡರು ಟಿ ಮರಿಯಪ್ಪ ವೃತ್ತದಲ್ಲಿ ನಿಂತು ಪ್ರತಿಭಟಿಸಿದ್ರು.

ಇಡಿ ಮತ್ತು ಐಟಿ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದ್ರು.
ಕಾಂಗ್ರೆಸ್ ಮುಖಂಡ ಎಂ.ಪ್ರಸನ್ನ ಮಾತನಾಡಿ, ಬಿಜೆಪಿ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು  
ಡಿ ಕೆ ಶಿವಕುಮಾರ್ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ.

ಐಟಿ ಮತ್ತು ಇಡಿ ಅಧಿಕಾರಿಗಳ ಮೂಲಕ ಬಿಜೆಪಿ ನೀಚ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ನಮ್ಮ  ನಾಯಕ ಡಿಕೆ ಶಿವಕುಮಾರ್, ಬಿಜೆಪಿಯವರ ಷಡ್ಯಂತ್ರಕ್ಕೆ ಕುಗ್ಗುವವರಲ್ಲ. ಅವರಿಗೆ ಕೋರ್ಟ್ ನಲ್ಲಿ ನ್ಯಾಯ ಸಿಗಲಿದೆ. ಶೀಘ್ರವೇ ಅವರನ್ನು ಬಿಡುಗಡೆ ಮಾಡದಿದ್ದರೆ ಉಗ್ರ  ಪ್ರತಿಭಟನೆ ಮಾಡುತ್ತೇವೆ ಎಂದ್ರು.  


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ‘ಹೇಮಾವತಿ ನದಿಯಲ್ಲಿ ಆ ಕೆಲಸಕ್ಕೆ ಹೆಣ್ಣು ಮಕ್ಕಳು ಇಳಿಯಬಾರದು ಎಂದ ಶಾಸಕ’