Select Your Language

Notifications

webdunia
webdunia
webdunia
Tuesday, 8 April 2025
webdunia

ಒಲೆಯ ಪಕ್ಕ ಮಲಗಿದ್ದ ಅಪ್ಪ ಅಡುಗೆ ಮಾಡುವಾಗ ಎದ್ದೇಳಲಿಲ್ಲವೆಂದು ಮಗ ಮಾಡಿದ್ದೇನು ಗೊತ್ತಾ?

ಚಿಕ್ಕಮಗಳೂರು
ಚಿಕ್ಕಮಗಳೂರು , ಶನಿವಾರ, 19 ಸೆಪ್ಟಂಬರ್ 2020 (10:14 IST)
ಚಿಕ್ಕಮಗಳೂರು : ಒಲೆಯ ಪಕ್ಕ ಮಲಗಿದ್ದ ಅಪ್ಪ ಅಡುಗೆ ಮಾಡಲು ಬಂದಾಗ ಎದ್ದೇಳಲಿಲ್ಲವೆಂದು ಮಗ  ಸೌದೆಯಿಂದ ಹೊಡೆದು ಅಪ್ಪನನ್ನು ಕೊಲೆ ಮಾಡಿದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬೆಳಗೋಡು ಗ್ರಾಮದಲ್ಲಿ ನಡೆದಿದೆ.

ಬಸಯ್ಯ(63) ಮೃತಪಟ್ಟ ತಂದೆ, ಮಂಜುನಾಥ್ (33) ಅಪ್ಪನನ್ನೇ ಕೊಂದ ಮಗ. ತಾಯಿ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದ್ದರು. ಆದಕಾರಣ ಮನೆಯಲ್ಲಿದ್ದ ಅಪ್ಪ ಮತ್ತು ಮಗ ಅಡುಗೆ ಕೆಲಸ ಮಾಡುತ್ತಿದ್ದರು. ಆದರೆ ಮಗ ಕೂಲಿ ಮಾಡಿ ಮನೆಗೆ ಬಂದು ಅಡುಗೆ ಮಾಡಲು ಬಂದಾಗ ಅಪ್ಪ ಒಲೆಯ ಪಕ್ಕ ಮಲಗಿದ್ದರು. ಎಷ್ಟೇ ಕರೆದರೂ ಎದ್ದೇಳಲಿಲ್ಲ. ಇದರಿಂದ ಕೋಪಗೊಂಡ ಮಗ ಸೌದೆ ಕಟ್ಟಿಗೆಯಿಂದ ಅಪ್ಪನ ತಲೆಗೆ ಹೊಡೆದಿದ್ದಾನೆ. ಇದರ ಪರಿಣಾಮ ರಾತ್ರಿ ಊಟ ಮಾಡಿ ಮಲಗಿದ್ದ ಅಪ್ಪನಿಗೆ ತಲೆಯಲ್ಲಿ ರಕ್ತಸ್ರಾವವಾಗಿ ಸಾವನಪ್ಪಿದ್ದಾರೆ.

ಈ ಘಟನೆಯ ಬಗ್ಗೆ ಮಗನೇ ಸ್ಥಳೀಯರಿಗೆ ತಿಳಿಸಿದ ಕಾರಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಮಗನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋದರ ಮಾವನ ಮುಂದೆಯೇ ಹುಡುಗಿಯ ಮೇಲೆ ಮುಗಿಬಿದ್ದ ಕಾಮುಕರು