ಹಾವೇರಿ : ಸಚಿವ ಸಂಪುಟ ವಿಸ್ತರಣೆಯಾಗುತ್ತಿರುವುದರ ಬಗ್ಗೆ ಇದೀಗ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,’ ಸಚಿವ ಸಂಪುಟ ವಿಸ್ತರಣೆ ಅನ್ನೋದು ನಾಳೆ ಬಾ ಅನ್ನೋ ಕಥೆಯಂತಿದೆ. ಸಚಿವ ಸ್ಥಾನ ಮೂರನೇ ವಾರ ಅಂದ್ರು. ಈಗ ಅಕ್ಟೋಬರ್ ಮೂರರ ನಂತರ ಅಂತಿದ್ದಾರೆ. ಆದಷ್ಟು ಬೇಗ ಸಂಪುಟ ವಿಸ್ತರಣೆ ಆಗೋದು ಒಳ್ಳೆಯದು’ ಎಂದು ಬಿ.ಸಿ.ಪಾಟೀಲ್ ಅವರು ತಿಳಿಸಿದ್ದಾರೆ.
‘ಕೆಪಿಸಿಸಿ ಅಧ್ಯಕ್ಷ ಮತ್ತು ಡಾ. ಪರಮೇಶ್ವರ್ ಸೇರಿದಂತೆ ಮುಖಂಡರಿಗೆ ತಿಳಿಸಿದ್ದೇನೆ. ತಡವಾದಷ್ಟು ಅಸಮಾಧನ ಹೆಚ್ಚಾಗುತ್ತೆ. ರಾಜ್ಯ ರಾಜಕಾರಣದಲ್ಲಿ ಏನೋ ಬೇಕಾದರೂ ಆಗಬಹುದು. ಸಿಕ್ಕಲ್ಲಿ ತೂರಿಕೊಳ್ಳೋ ಜನರಿದ್ದಾರೆ. ಸದ್ಯ ಬಿಜೆಪಿಯವರು ನನ್ನನ್ನು ಸಂಪರ್ಕಿಸಿಲ್ಲ. ನಾನು ಎಲ್ಲೂ ಹೋಗಿಲ್ಲ. ಈಗ ಹಾವೇರಿಯಲ್ಲಿದ್ದೇನೆ. ರಾಜಕಾರಣದಲ್ಲಿ ಏನೋ ಬೇಕಾದರೂ ಆಗಬಹುದು’ ಎಂದು ಅಸಮಾಧಾನ ಹೊರಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.