ಬಿ.ಎಸ್.ಯಡಿಯೂರಪ್ಪನವರಿಗೆ ಎಚ್ಚರಿಕೆ ನೀಡಿದ ಸಿಎಂ ಕುಮಾರಸ್ವಾಮಿ

Webdunia
ಗುರುವಾರ, 20 ಸೆಪ್ಟಂಬರ್ 2018 (12:52 IST)
ಬೆಂಗಳೂರು : ಬಿಜೆಪಿಯವರು ಆಪರೇಷನ್ ಕಮಲ ನಡೆಸುತ್ತಿರುವ ಇದೀಗ ಸಿಎಂ ಕುಮಾರಸ್ವಾಮಿಯವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಅಧಿಕಾರ ತನ್ನ ಕೈಯಲ್ಲಿ ಇದೆ ಎಂಬುದಾಗಿ ಎಚ್ಚರಿಕೆ  ನೀಡಿದ್ದಾರೆ.


ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ತಮ್ಮ ಮಾತಿನ ಮೇಲೆ ಹಿಡಿತವಿಟ್ಟುಕೊಳ್ಳಬೇಕು. ಅಪ್ಪ-ಮಕ್ಕಳು ಲೂಟಿ ಕೋರರು ಅಂತಾ ಹೇಳಿಕೆ ನೀಡಿದ್ದಾರೆ. ಯಾರು ಲೂಟಿ ಕೋರರು ಎಂಬುದನ್ನು ಮೊದಲು ತೋರಿಸಬೇಕು. ಈ ಹಿಂದೆಯೂ ಸಹ ನಮ್ಮನ್ನ ಜೈಲಿಗೆ ಕಳಿಸುತ್ತೀನಿ ಎಂದು ಅವರೇ ಜೈಲಿಗೆ ಹೋಗಿದ್ದರು. ಇಂದು ಡಿ.ಕೆ ಶಿವಕುಮಾರ್‍ರನ್ನು ಜೈಲಿಗೆ ಕಳುಹಿಸುತ್ತೀವಿ ಅಂತಾ ಹೇಳಿಕೆ ನೀಡುತ್ತಾರೆ’ ಎಂದು ಬಿಎಸ್‍ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಅಲ್ಲದೇ ‘ಯಡಿಯೂರಪ್ಪ ರಾಜಕೀಯದಲ್ಲಾಗಲಿ, ವಯಸ್ಸಿನಲ್ಲಾಗಲಿ ನಮಗಿಂತ ಹಿರಿಯರಾಗಿದ್ದಾರೆ. ಅವರು ಪದ ಬಳಕೆ ಮಾಡುವಾಗ ಸ್ವಲ್ಪ ಹಿಡಿತದಲ್ಲಿಟ್ಟುಕೊಳ್ಳಬೇಕು. ಪರ್ಸೆಂಟೇಜ್ ಸರ್ಕಾರವನ್ನು ತಂದವರೇ ನೀವು, ಪರ್ಸೆಂಟೇಜ್ ಪಿತಾಮಹ ಯಡಿಯೂರಪ್ಪನವರು. ಹೀಗೆ ನೀವು ನಿಮ್ಮ ಮಾತನ್ನು ಮುಂದುವರಿಸಿದರೆ ಮುಂದೆ ಸಂಕಷ್ಟ ಎದುರಿಸಬೇಕಾಗುತ್ತದೆ. ಗಾಜಿನ ಮನೆಯಲ್ಲಿ ಕೂತು ಕಲ್ಲುಹೊಡೆಯುವುದನ್ನು ಮೊದಲು ನಿಲ್ಲಿಸಿ’ ಎಂದು ಎಚ್ಚರಿಕೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಕ್ಸಿಡೆಂಟ್ ಆಗಿ ಐಸಿಯುವಿನಲ್ಲಿದ್ದರೂ ವಧುವಿನ ಕೈ ಬಿಡದ ವರ ಮಾಡಿದ್ದೇನು Video

ಸ್ವಲ್ಪವೂ ಸೆನ್ಸ್ ಇಲ್ಲ...ಹೊಸ ಕಾಂಕ್ರೀಟ್ ಮೇಲೆ ಸ್ಕೂಟಿ ಓಡಿಸಿ ಕೆಸರು ಗೆದ್ದೆ ಮಾಡಿದ ಭೂಪ Video

ಪ್ರಧಾನಿ ಮೋದಿ ಕರೆಗೆ ಸ್ಪಂದಿಸಿ ಮೆಟ್ರೋ ಹಿಡಿದ ಬಿವೈ ವಿಜಯೇಂದ್ರ

ವಿದೇಶ ಪ್ರವಾಸ ಮೇಲೆ ಹೆಚ್ಚುವರಿ ತೆರಿಗೆನಾ: ಪ್ರಧಾನಿ ಮೋದಿ ಗರಂ

ಢಿಕ್ಕಿ ಹೊಡೆದಿದ್ಯಾಕೆ ಎಂದು ಕೆನ್ನೆಗೆ ಹೊಡೆದ ಯುವತಿ: ಯುವಕ ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments