Select Your Language

Notifications

webdunia
webdunia
webdunia
webdunia

ಡಿಕೆಶಿ ಮೇಲೆ ಸಂಬಿತ್ ಪಾತ್ರಾ ಆರೋಪಗಳಿಗೆ ಸಿದ್ದರಾಮಯ್ಯ ತಿರುಗೇಟು

ಸಂಬಿತ್ ಪಾತ್ರಾ
ಬೆಂಗಳೂರು , ಗುರುವಾರ, 20 ಸೆಪ್ಟಂಬರ್ 2018 (09:46 IST)
ಬೆಂಗಳೂರು: ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಮೇಲೆ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅಕ್ರಮ ಹಣ ವರ್ಗಾವಣೆ ಬಗ್ಗೆ ಮಾಡಿರುವ ಆರೋಪಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ತಳ್ಳಿ ಹಾಕಿದ್ದಾರೆ.

ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ. ಇದಕ್ಕಾಗಿ ಅಕ್ರಮ ಮಾಡುವ ಕಿಂಗ್ ಪಿನ್ ಗಳ ಹಣ ಸಹಾಯ ಪಡೆಯುತ್ತಿದೆ ಎಂಬ ಆರೋಪಗಳಿಗೆ ಪ್ರತಿಯಾಗಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಡಿಕೆಶಿ ಪ್ರಕರಣವನ್ನು ನೆನಪಿಸಿ ಸುದ್ದಿಗೋಷ್ಠಿಯಲ್ಲಿ ಆರೋಪಗಳ ಸುರಿಮಳೆ ಸುರಿಸಿದ್ದರು.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಸಂಬಿತ್ ಪಾತ್ರಾ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಇದು ರಾಜಕೀಯ ಪ್ರೇರಿತ ಸಂಚು. ಜುಮ್ಲಾ ಪಡೆಯುವುದು ಬಿಜೆಪಿಯ ಚಾಳಿ, ಇಂತಹ ಕೆಲಸವೆಲ್ಲಾ ಅವರ ರಾಜಕೀಯ ಅಜೆಂಡಾದಲ್ಲೇ ಇದೆ ಎಂದು ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿಯಾದ ತಕ್ಷಣ ರಾಹುಲ್ ಗಾಂಧಿ ಮಾಡುವ ಮೊದಲ ಕೆಲಸ ಇದುವೇ ಅಂತೆ!