Publish Date: Mon, 23 Nov 2020 (13:29 IST)
Updated Date: Mon, 23 Nov 2020 (13:30 IST)
ಬೆಂಗಳೂರು : ಶಾಲೆ ಆರಂಭಿಸುವ ಬಗ್ಗೆ ಇಂದು ಸಿಎಂ ತಮ್ಮ ನೇತೃತ್ವದಲ್ಲಿ ಸಚಿವರ ಸಭೆ ನಡೆಸಲಿದ್ದಾರೆ. ಆ ಮೂಲಕ ಇಂದು ಶಾಲೆ ಮಕ್ಕಳ ಭವಿಷ್ಯ ನಿರ್ಧಾರವಾಗಲಿದೆ.
ಈ ಬಗ್ಗೆ ಸುದ್ದಿಗಾರರೊಂಧಿಗೆ ಮಾತನಾಡಿದ ಸಿಎಂ ಬಿಎಸ್ ವೈ, ಶಾಲೆ ಆರಂಭಿಸುವ ಬಗ್ಗೆ ಸಭೆ ಮಾಡುತ್ತಿದ್ದೇನೆ. ಎಲ್ಲರ ಅಭಿಪ್ರಾಯ, ಸಲಹೆ ಪಡೆಯುತ್ತೇನೆ. ಅಭಿಪ್ರಾಯ ನೋಡಿಕೊಂಡು ಶಾಲೆ ಆರಂಭದ ಬಗ್ಗೆ ನಿರ್ಧರಿಸ್ತೇನೆ ಎಂದು ಹೇಳಿದ್ದಾರೆ.
ಹಾಗೇ ಈ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಶಾಲೆ ಆರಂಭದ ಬಗ್ಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದೇವೆ. ಸಿಎಂಗೆ ನಮ್ಮ ಇಲಾಖೆಯಿಂದ ವರದಿ ಸಲ್ಲಿಸಲಾಗುವುದು. ಶಾಲೆಗಳ ಆರಂಭ ವಿಳಂಬದಿಂದ ಹಲವು ಸಮಸ್ಯೆಗಳು ಸೃಷ್ಟಿ ಯಾಗಿದೆ. ಬಾಲಕಾರ್ಮಿಕರು, ಬಾಲ್ಯ ವಿವಾಹ ಪ್ರಕರಣ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.