Publish Date: Mon, 01 Jul 2019 (13:44 IST)
Updated Date: Mon, 01 Jul 2019 (13:46 IST)
ಬೆಂಗಳೂರು : ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಜೊತೆ ಕಾಂಗ್ರೆಸ್ ಪಕ್ಷದ ಇನ್ನೂ ಹಲವು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಈ ಬಗ್ಗೆ ಮಾತನಾಡಿದ ಕುಷ್ಟರ್ಗಿ ಕೈ ಶಾಸಕ ಅಮರೇಗೌಡ ಬಯ್ಯಾಪುರ, ಆನಂದ್ ಸಿಂಗ್ ಗೆ ಬಿಜೆಪಿ ಬೇಕಾಗಿದೆ. ಹೀಗಾಗಿ ಸೇರಿದ್ದಾರೆ. ನಾನು ಪಕ್ಷಕ್ಕೆ ರಾಜೀನಾಮೆ ನೀಡುವುದಿಲ್ಲ. ಒಂದು ವೇಳೆ ನನಗೆ ರಾಜಕೀಯವಾಗಿ ಬೇಜಾರಾಗಿದ್ರೆ ರಾಜೀನಾಮೆ ಯನ್ನು ಕೊಟ್ಟು ಮನೆಗೆ ಹೋಗುತ್ತೇನೆ ಹೊರತು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಈ ಹಿಂದೆ ಸಚಿವ ಸ್ಥಾನ ಸಿಗದ ಹಿನ್ನಲೆಯಲ್ಲಿ ಆನಂದ್ ಸಿಂಗ್ ಜೊತೆ ಅನೇಕ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಆ ವೇಳೆ ಅವರಲ್ಲಿ ಕುಷ್ಟರ್ಗಿ ಕೈ ಶಾಸಕ ಅಮರೇಗೌಡ ಬಯ್ಯಾಪುರ ಪಕ್ಷ ಬಿಡುತ್ತಾರೆ ಎಂದು ಅವರ ಬೆಂಬಲಿಗರು ಸುದ್ದಿ ಹಬ್ಬಿಸಿದ್ದರು.