Webdunia - Bharat's app for daily news and videos

Install App

ಹೆಪಟೈಟಿಸ್ ಸಮಸ್ಯೆ ಮಕ್ಕಳಲ್ಲಿ ಹೆಚ್ಚಾಗಲು ಕಾರಣಗಳೇನು? ಅನ್ನುವುದರ ಮಾಹಿತಿ ಇಲ್ಲಿದೆ

Webdunia
ಭಾನುವಾರ, 7 ನವೆಂಬರ್ 2021 (20:49 IST)
ಇದುವರೆಗಿನ ಸಾಂಕ್ರಾಮಿಕ ರೋಗದ ಸಂದರ್ಭವು ಲಾಕ್ಡೌನ್ ಎನ್ನುವ ನೆಪದಲ್ಲಿ, ಮನೆಯ ಮಕ್ಕಳನ್ನು ಮನೆಯಲ್ಲಿಯೇ ಕೂಡಿ ಹಾಕಿ, ಹೊರಗೆ ಅವರು ಗೆಳೆಯರ ಜೊತೆ ಕಾಣುತ್ತಿದ್ದ ಸುಖ ಸಂತೋಷಗಳನ್ನು ಕಿತ್ತುಕೊಂಡು, ಕೇವಲ ಮನೆಯ ಟಿವಿ, ವಿಡಿಯೋ ಗೇಮ್, ಮೊಬೈಲ್ ಫೋನ್ ಇತ್ಯಾದಿಗಳ ಮೂಲಕ ಮಾತ್ರ ಖುಷಿಯನ್ನು ಕಾಣುವ ಹಾಗೆ ಮಾಡಿತ್ತು. ಆದರೆ ಈಗ ನಿಧಾನವಾಗಿ ಎಲ್ಲವೂ ಅನ್ಲಾಕ್ ಪ್ರಕ್ರಿಯೆಯ ಮೂಲಕ ತೆರೆದುಕೊಳ್ಳುತ್ತಿದೆ. ಮಕ್ಕಳಿಗೂ ಕೂಡ ತಾವು ಇಷ್ಟು ದಿನ ಕಳೆದುಕೊಂಡ ದಿನಗಳನ್ನು ಮತ್ತೆ ಪಡೆಯುವ ಅವಕಾಶ ಸಿಕ್ಕಿದೆ. ಮಕ್ಕಳು ತಮ್ಮ ಬೆಳವಣಿಗೆಗೆ ಅನುಕೂಲವಾಗುವಂತೆ ಚಟುವಟಿಕೆಗಳಲ್ಲಿ ತೊಡಗುವುದು ಅವಶ್ಯಕವಾಗಿದೆ. ಆದರೆ ತಮ್ಮ ಮನೆಯ ಪುಟ್ಟ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಕೂಡ ಹೆಚ್ಚಿನ ಕಾಳಜಿ ವಹಿಸಬೇಕು. ಮನೆಯ ಹೊರಗಡೆ ಮಕ್ಕಳನ್ನು ಬಿಡುವ ಸಂದರ್ಭದಲ್ಲಿ ಕೋವಿಡ್-19 ಸೋಂಕು ತಗುಲದಂತೆ ಮಕ್ಕಳಿಗೆ ಎಲ್ಲಾ ಬಗೆಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಬೇಕು. ಈ ಸಂದರ್ಭದಲ್ಲಿ ಕೇವಲ ಕೊರೋನಾ ಮಾತ್ರವಲ್ಲದೆ ಬಗೆಬಗೆಯ ಆರೋಗ್ಯದ ಸೋಂಕುಗಳು ಕೂಡ ಮಕ್ಕಳಿಗೆ ಭಾದೆ ಕೊಡಬಲ್ಲವು.
 
ಮನೆಯಿಂದ ಹೊರಹೋಗುವ ಮಕ್ಕಳು ತಮ್ಮ ಗೆಳೆಯರ ಜೊತೆಗೂಡಿ ಕ್ರೀಡಾ ಚಟುವಟಿಕೆಗಳಲ್ಲಿ ನಕ್ಕು ನಲಿಯುವ ಜೊತೆಗೆ ರಸ್ತೆಬದಿಯ ಆಹಾರಗಳ ಕಡೆಗೂ ಕೂಡ ಅಷ್ಟೇ ಒಲವನ್ನು ಹೊಂದಿರುತ್ತಾರೆ. ಹೀಗಾಗಿ ಮಕ್ಕಳಿಗೆ ಕಲುಷಿತ ಆಹಾರ ಮತ್ತು ಕೊಳಕು ನೀರಿನಿಂದ ಕಾಯಿಲೆಗಳು ಹರಡುವ ಸಾಧ್ಯತೆ ದಟ್ಟವಾಗಿರುತ್ತದೆ. ಇದಕ್ಕೆ ಉದಾಹರಣೆ ಎನ್ನುವಂತೆ ಜಾಂಡಿಸ್ ಸಮಸ್ಯೆ ಮಕ್ಕಳನ್ನು ಕಾಡಬಹುದು. ಕಲುಷಿತ ಪ್ರದೇಶಗಳಲ್ಲಿ ಕಂಡುಬರುವ ಹೆಪಟೈಟಸ್ ಎ ವೈರಸ್ ಇದಕ್ಕೆ ಪ್ರಮುಖ ಕಾರಣ ಎಂಬುದನ್ನು ಮರೆಯಬಾರದು.
 
ಇದಕ್ಕೆ ಕಾರಣಗಳೇನು ?
 
ವಾಣಿಜ್ಯ ವೀಡಿಯೋ
 
ಮೋದಿ-ಬಿಡೆನ್ ಒಟ್ಟಿಗೆ ಬಿಡಿಸಬೇಕಾಗಿರುವ ವ್ಯಾಪಾರ ಕಗ್ಗಂಟುಗಳು!
 
ಎರಡನೇ ತ್ರೈಮಾಸಿಕದಲ್ಲಿ ನಿರೀಕ್ಷೆ ಮೀರಿ ಲಾಭ ಗಳಿಸಿದ ಇನ್ಫೋಸಿಸ್‌!
 
ಕೇಂದ್ರ ಸರ್ಕಾರಿ ನೌಕರರಿಗೆ 10 ಸಾವಿರ ರೂ. ಹಬ್ಬದ ಮುಂಗಡ ಯೋಜನೆ:ನಿರ್ಮಲಾ ಸೀತಾರಾಮನ್!
 
ಹೆಪಟೈಟಿಸ್ ಎ ಎಂದರೇನು?
ಹೆಪಟೈಟಿಸ್ ಎ ಅಥವಾ ಜಾಂಡಿಸ್, ಒಂದು ಅಂಟು ರೋಗವಾಗಿದ್ದು, ಮುಖ್ಯವಾಗಿ ಲಿವರ್ ಭಾಗದಲ್ಲಿ ಸೋಂಕು ಉಂಟು ಮಾಡುತ್ತದೆ. ಈ ರೋಗವು ಸಾಮಾನ್ಯದಿಂದ ಹೆಚ್ಚು ತೀವ್ರತೆಯಿಂದ ಕೂಡಿದ್ದು, ಕೆಲವು ವಾರಗಳಿಂದ ತಿಂಗಳುಗಳವರೆಗೆ ಇದರ ಪ್ರಭಾವ ಇರುತ್ತದೆ ಎಂದು ಹೇಳುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ಪ್ರತಿವರ್ಷ ಪ್ರಪಂಚದಾದ್ಯಂತ ಸುಮಾರು 10 ಕೋಟಿ ಜನರು ಹೆಪಟೈಟಿಸ್ ಎ ಸಮಸ್ಯೆಯಿಂದ ಸೋಂಕಿಗೆ ಒಳಗಾಗುತ್ತಿದ್ದಾರೆ. ಆದರೆ ಪುಟ್ಟ ಮಕ್ಕಳಲ್ಲಿ ಸಾಮಾನ್ಯವಾಗಿ ಇಂತಹ ಲಿವರ್ ಸೋಂಕನ್ನು ಕಡಿಮೆ ಪ್ರಭಾವ ಹೊಂದಿದ ಕಾಯಿಲೆ ಎಂದು ಗುರುತಿಸುತ್ತಾರೆ. ಆದರೂ ಕೂಡ ಕೆಲವು ಪ್ರಕರಣಗಳಲ್ಲಿ ಮಾತ್ರ ಇದು ತುಂಬಾ ಗಂಭೀರವಾದ ಸಮಸ್ಯೆಯನ್ನು ತಂದುಕೊಡಬಹುದು. ಆದರೆ ದೊಡ್ಡ ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ, ಈ ಸೋಂಕು ಗಂಭೀರವಾದ ರೋಗಲಕ್ಷಣಗಳನ್ನು ಉಂಟು ಮಾಡುತ್ತದೆ ಮತ್ತು ಶೇಕಡ 70% ಪ್ರಕರಣಗಳಲ್ಲಿ ಇದು ಜಾಂಡಿಸ್ ರೂಪಕ್ಕೆ ತಿರುಗುತ್ತದೆ ಎಂದು ತಿಳಿದುಬಂದಿದೆ.
 
ಹೆಪಟೈಟಿಸ್ ಎ ಸೋಂಕು ಸಾಧಾರಣವಾಗಿ ದೀರ್ಘಕಾಲದ ರೋಗವನ್ನು ಉಂಟು ಮಾಡುವುದಿಲ್ಲ; ಆದರೆ ಅವುಗಳನ್ನು ಆರಂಭದಲ್ಲಿ ಕಂಡುಹಿಡಿದುಕೊಳ್ಳದೆ ಹೋದರೆ, ಗಂಭೀರ ಸ್ವರೂಪಕ್ಕೆ ತಿರುಗುವ ಸಾಧ್ಯತೆ ಇದೆ. ಕೆಲವು ಪ್ರಕರಣಗಳಲ್ಲಿ ಇದು ಲಿವರ್ ಭಾಗಕ್ಕೆ ಹಾನಿ ಉಂಟುಮಾಡುವುದು ಮಾತ್ರವಲ್ಲದೆ ಸೋಂಕಿಗೆ ಒಳಗಾದ ವ್ಯಕ್ತಿಯ ಪ್ರಾಣಕ್ಕೆ ಸಂಚಕಾರ ತರುವ ಸಾಧ್ಯತೆ ಕೂಡ ಇದೆ. ಇಡೀ ಪ್ರಪಂಚದಾದ್ಯಂತ ಸದ್ಯ ಈ ರೀತಿಯ ಸಮಸ್ಯೆ ಇದ್ದು, ಸ್ವಚ್ಛತೆ ಇಲ್ಲದೆ ಇರುವ ಪ್ರದೇಶಗಳು ಹೆಚ್ಚಿನ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಇದುವರೆಗೂ ಮಕ್ಕಳು ಮನೆಯಲ್ಲೇ ಇದ್ದ ಕಾರಣ ಇಂತಹ ಒಂದು ಸೋಂಕನ್ನು ಮಕ್ಕಳು ಕಂಡಿರಲಿಲ್ಲ. ಆದರೆ ಈಗ ಅನ್ಲಾಕ್ ಆಗಿರುವುದರಿಂದ ಹೆಚ್ಚಿನ ಮಕ್ಕಳು ಹೊರಗಡೆ ಓಡಾಡುವುದರಿಂದ ಸುಲಭವಾಗಿ ಸೋಂಕಿಗೆ ಗುರಿಯಾಗಿ ತಮ್ಮ ಪ್ರೌಢಾವಸ್ಥೆಯಲ್ಲಿ ಹಾಗೂ ವಯಸ್ಸಿಗೆ ಬಂದ ನಂತರದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇರುತ್ತದೆ.
 
ಹೆಪಟೈಟಿಸ್ ಎ ಹೇಗೆ ಹರಡುತ್ತದೆ?
ಯಾವ ಆಹಾರ ಅಥವಾ ನೀರಿನಲ್ಲಿ ಈಗಾಗಲೇ ಹೆಪಟೈಟಿಸ್ ವೈರಸ್ ಸೋಂಕು ಇರುತ್ತದೆ ಅಂತಹ ಆಹಾರ ಅಥವಾ ನೀರನ್ನು ಮಕ್ಕಳು ಸೇವನೆ ಮಾಡಿದ ಸಂದರ್ಭದಲ್ಲಿ ಮಕ್ಕಳಿಗೆ ಸುಲಭವಾಗಿ ಹರಡುತ್ತದೆ. ಇನ್ನು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಎಂದರೆ ಅದು ಮಲವಿಸರ್ಜನೆಯ ಪ್ರಕಾರದಿಂದ ಅಥವಾ ಕೊಳಕು ನೀರು ಮತ್ತು ಕಲುಷಿತ ಆಹಾರವನ್ನು ಉಪಯೋಗಿಸಿ, ಆಹಾರವನ್ನು ಆರೋಗ್ಯಕರವಾದ ವಾತಾವರಣದಲ್ಲಿ ಶೇಖರಣೆ ಮಾಡದೆ ಆರೋಗ್ಯವಂತ ವ್ಯಕ್ತಿಗೆ ನೀಡಿದ ಸಂದರ್ಭದಲ್ಲಿ ಹರಡುತ್ತದೆ.
 
ಹೆಪಟೈಟಿಸ್ ಎ ರೋಗಲಕ್ಷಣಗಳು
ಸೋಂಕಿಗೆ ಒಳಗಾದ ಪ್ರತಿಯೊಬ್ಬರಿಗೂ ಈ ರೀತಿಯ ರೋಗಲಕ್ಷಣಗಳು ಇರುತ್ತವೆ ಎಂದು ಹೇಳಲು ಬರುವುದಿಲ್ಲ. ಆದರೆ ಸೋಂಕು ಉಂಟಾದ ಎರಡರಿಂದ ಆರು ವಾರಗಳ ಒಳಗೆ ರೋಗಲಕ್ಷಣಗಳು ಕಾಣಿಸಲು ಪ್ರಾರಂಭವಾಗುತ್ತವೆ. ಅವುಗಳೆಂದರೆ
ಜ್ವರ
ವಾಂತಿ
ತಿಳಿ ಕಪ್ಪು ಬಣ್ಣದ ಮಲ
ಆಯಾಸ
ಹೊಟ್ಟೆ ನೋವು
ಕೀಲುನೋವು
ಹೊಟ್ಟೆ ಹಸಿವು ಇಲ್ಲದಾಗುವುದು
ವಾಕರಿಕೆ ಬಂದ ಅನುಭವ ಉಂಟಾಗುವುದು
ಜಾಂಡಿಸ್ ಸಮಸ್ಯೆ ಕಾಣಿಸುವುದು
 
ಆದರೆ ನೆನಪಿಡಿ, ಸೋಂಕಿಗೆ ಗುರಿಯಾದ ಪ್ರತಿಯೊಬ್ಬರಿಗೂ ಈ ಮೇಲಿನ ರೋಗ ಲಕ್ಷಣಗಳು ಕಾಣಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಅಪರೂಪದ ಪ್ರಕರಣಗಳಲ್ಲಿ ಮಾತ್ರ, ರೋಗಲಕ್ಷಣಗಳು ಆರು ತಿಂಗಳುಗಳವರೆಗೆ ಇರುವ ಸಾಧ್ಯತೆ ಇದೆ.
 
ಇದನ್ನು ತಡೆಯುವ ಬಗೆ ಹೇಗೆ?
ಹೌದು. ಹೆಪಟೈಟಿಸ್ ಎ ಸೋಂಕನ್ನು ತಡೆಯಬಹುದು. ಇದರಿಂದ ರಕ್ಷಿಸಿಕೊಳ್ಳಲು ಇರುವ ಕೆಲವು ಸುಲಭ ಮಾರ್ಗಗಳು ಎಂದರೆ:
1.ಶುದ್ಧವಾದ ನೀರನ್ನು ಮತ್ತು ಚೆನ್ನಾಗಿ ಬೇಯಿಸಿದ ಆಹಾರವನ್ನು ಸೇವನೆ ಮಾಡುವುದು. ಇದರ ಜೊತೆಗೆ ಹಸಿ ಮಾಂಸ ಮತ್ತು ಶೆಲ್ಫಿಶ್ ಸೇವನೆ ಮಾಡುವುದನ್ನು ಬಿಡಬೇಕು ಜೊತೆಗೆ ಹಣ್ಣು ಮತ್ತು ತರಕಾರಿಗಳನ್ನು ಶುದ್ಧವಾದ ನೀರಿನಲ್ಲಿ ತೊಳೆದು ತಿನ್ನಬೇಕು.
2. ಟಾಯ್ಲೆಟ್ ಉಪಯೋಗಿಸಿದ ನಂತರ ನಿಮ್ಮ ಕೈಗಳನ್ನು ಸೋಪು ಹಾಕಿ ಶುದ್ಧವಾದ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ಆಹಾರ ತಿನ್ನುವ ಅಥವಾ ಅಡುಗೆ ಮಾಡುವ ಮುಂಚೆ ಮಕ್ಕಳ ನ್ಯಾಪ್ಕಿನ್ ಬದಲಿಸಿದ್ದರೆ, ಆಗಲೂ ಸಹ ಕೈಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಿ.
3. ನಿಮ್ಮ ಮನೆ ಒಳಗೆ ಮತ್ತು ಹೊರಗೆ ಆರೋಗ್ಯಕರವಾದ ವಾತಾವರಣ ಇರುವಂತೆ ನೋಡಿಕೊಳ್ಳಿ.
4. ನಿಮ್ಮ ಮಕ್ಕಳಿಗೆ ಹೆಪಟೈಟಿಸ್ ಎ ವಿರುದ್ಧ ಲಸಿಕೆ ಹಾಕಿಸಿ.
 
ಹೆಪಟೈಟಿಸ್ ಎ ಸಮಸ್ಯೆಗೆ ಚಿಕಿತ್ಸೆ
ಇದುವರೆಗೂ ಹೆಪಟೈಟಿಸ್ ಎ ಸಮಸ್ಯೆಗೆ ಸಂಬಂಧಪಟ್ಟಂತೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಕೇವಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಈ ಸಮಸ್ಯೆಯಿಂದ ಸುರಕ್ಷಿತವಾಗಿ ಪಾರಾಗಬಹುದು. ಲಸಿಕೆ ಹಾಕಿಸಿಕೊಳ್ಳುವುದು ಇದಕ್ಕಿರುವ ಪ್ರಮುಖ ಮಾರ್ಗ.
 
ಹೆಪಟೈಟಿಸ್ ಎ ಲಸಿಕೆ ಯಾವಾಗ ಕೊಡಲಾಗುತ್ತದೆ?
ನಿಮ್ಮ ಮಕ್ಕಳಿಗೆ ಒಂದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಾಗಿದ್ದರೆ ಹೆಪಟೈಟಿಸ್ ಎ ಗೆ ಸಂಬಂಧಪಟ್ಟಂತೆ ಲಸಿಕೆಗಳನ್ನು ನೀಡಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತೀಯ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಹೇಳುವ ಪ್ರಕಾರ ಪ್ರತಿಯೊಬ್ಬ ಮಗುವಿಗೂ ಕೂಡ ಹೆಪಟೈಟಿಸ್ ಎ ಲಸಿಕೆ ನೀಡಬೇಕು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments