Select Your Language

Notifications

webdunia
webdunia
webdunia
webdunia

“ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ವಿದ್ಯಾಭ್ಯಾಸದ ಹೊಣೆ ನನ್ನದು”

I am responsible for the education
bangalore , ಸೋಮವಾರ, 1 ನವೆಂಬರ್ 2021 (20:09 IST)
ಸ್ಯಾಂಡಲ್ ವುಡ್ ನಟ ಪುನೀತ್ ರಾಜಕುಮಾರ್ ಓದಿಸುತ್ತಿದ್ದ 1800 ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವುದಾಗಿ ತಮಿಳು ನಟ ವಿಶಾಲ್​ ಘೋಷಣೆ ಮಾಡಿದ್ದಾರೆ.
ವಿಶಾಲ್ ಮತ್ತು ಆರ್ಯ ಅಭಿನಯದ ‘ಎನಿಮಿ’ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ನಡೆದಿದ್ದು, ಕಾರ್ಯಕ್ರಮ ಆರಂಭಿಸುವ ಮುನ್ನ ಚಿತ್ರತಂಡ ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು.
ಈ ವೇಳೆ ಬಾವುಕರಾದ ವಿಶಾಲ್ ಪುನೀತ್ ಬಗ್ಗೆ ಮಾತನಾಡಿದರು.” ಪುನೀತ್ ಒಳ್ಳೆಯ ನಟ ಮಾತ್ರವಲ್ಲ ಒಳ್ಳೆಯ ಸ್ನೇಹಿತ ಕೂಡ. ಅವರಂತಹ ಡೌನ್ ಟು ಅರ್ಥ್ ಸೂಪರ್ ಸ್ಟಾರ್ ಅನ್ನು ನಾನು ನೋಡಿಯೇ ಇಲ್ಲ. ಮುಂದಿನ ವರ್ಷದಿಂದ ಪುನೀತ್ ಅವರಿಂದ ಉಚಿತ ಶಿಕ್ಷಣ ಪಡೆಯುತ್ತಿರುವ 1800 ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹೊಣೆ ಹೊರುವ ಭರವಸೆ ನೀಡುತ್ತೇನೆ” ಎಂದು ಘೋಷಿಸಿದರು.
ಪುನೀತ್ ರಾಜ್​ಕುಮಾರ್ ಸದ್ದಿಲ್ಲದೆ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಕೂಡ ತೊಡಗಿಕೊಂಡಿದ್ದರು ಎಂಬ ವಿಚಾರ ಅವರ ನಿಧನಾನಂತರ ಹೆಚ್ಚು ಹೆಚ್ಚು ಬಯಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯೋತ್ಸವ ದಿನದಂದೇ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ: 20ಕ್ಕೂ ಅಧಿಕ ಮಂದಿ ವಶಕ್ಕೆ