ಸಿಲಿಕಾನ್ ಸಿಟಿಯಲ್ಲಿ ಮದ್ಯಪಾನ ಮಾಡಿದ ಪುಂಡರು ಬಾಲಕರಿಗೆ ತೀವ್ರ ಹಿಂಸೆ ನೀಡಿದ ದಾರುಣ ಘಟನೆ ನಡೆದಿದೆ.
	 
 
 			
 
 			
			                     
							
							
			        							
								
																	
	ನಗರದ ಬಿ.ನಾರಾಯಣಪುರದಲ್ಲಿ ದುರ್ಘಟನೆ ನಡೆದಿದೆ. ಇದು ಎರಡು ದಿನದ ಹಿಂದೆ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ.ಬಾಲಕರು ಶಾಲಾ ಮೈದಾನಕ್ಕೆ ಆಟವಾಡಲು ಹೋದಾಗ ಈ ಘಟನೆ ನಡೆದಿದೆ. ಅವರನ್ನು ಸುತ್ತುವರಿದ ಯುವಕರ ಗುಂಪು ಒಂದು ತಾಸಿಗೂ ಹೆಚ್ಚು ಸಮಯ ಹಿಂಸೆ ನೀಡಿದ್ದಾರೆ. ಮರಕ್ಕೆ ಕಟ್ಟಿಹಾಕಿ ಬೀಡಿ ಸೇದುವಂತೆ ಒತ್ತಾಯಿಸಿದ್ದಾರೆ. ಮಕ್ಕಳು ಬಿಟ್ಟುಬಿಡುವಂತೆ ಕಣ್ಣೀರು ಹಾಕಿದರೂ ಬಿಡದ ಪುಂಡರು ವಿಕೃತಿ ಮೆರೆದಿದ್ದು ಇದೆಲ್ಲವನ್ನೂ ವಿಡಿಯೋ ಸಹ ಮಾಡಿದ್ದಾರೆ.
	 
	ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೃತ್ಯದ ಬಗ್ಗೆ ಮಕ್ಕಳು ಪೋಷಕರಿಗೆ ತಿಳಿಸಿದ್ದು ನಂತರ ಮಹದೇವಪುರ ಪೊಲೀಸರಿಗೆ ದೂರು ನೀಡಲಾಗಿದೆ.