ಬೆಂಗಳೂರು: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿರುವುದರಿಂದ ಆಗಿರುವ ಲಾಭ ಮತ್ತು ನಷ್ಟವೇನು ಇಲ್ಲಿದೆ ಡೀಟೈಲ್ಸ್.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ನಿನ್ನೆ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ. ಇದರ ಬೆನ್ನಲ್ಲೇ ಕೆಲವರು ಇದಕ್ಕೆ ಸಂತೋಷ ವ್ಯಕ್ತಪಡಿಸಿದ್ದರೆ ಮತ್ತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಇದರ ಲಾಭ ಮತ್ತು ನಷ್ಟವೇನು ಇಲ್ಲಿದೆ ವಿವರ.
ಲಾಭವೇನು?
-ಬೆಂಗಳೂರು ಹೆಸರು ಉದ್ಯಮಿಗಳನ್ನು ಆಕರ್ಷಿಸಬಹುದು. ರಾಮಗರನ ಜಿಲ್ಲೆಯಲ್ಲಿ ಇನ್ನು ಹೊಸ ಉದ್ಯಮಗಳು ತಲೆಯೆತ್ತಬಹುದು. ಇದರಿಂದ ಉದ್ಯೋಗ ಸೃಷ್ಟಿಯಾಗಬಹುದು.
-ಐಟಿ, ಬಿಟಿ ಕಂಪನಿಗಳು ತಲೆಯೆತ್ತಬಹುದು.
-ಇಲ್ಲಿನ ಭೂಮಿ ಬೆಲೆ ಹೆಚ್ಚಳವಾಗಲಿದೆ. ಇದರಿಂದ ಭೂಮಿ ಹೊಂದಿರುವವರಿಗೆ ಲಾಭವಾಗಬಹುದು.
-ರೈಲು, ರಸ್ತೆ ಸೇರಿದಂತೆ ಮೂಲಸೌಕರ್ಯಾಭಿವೃದ್ಧಿಯಾಗಲಿದೆ.
ನಷ್ಟವೇನು?
-ಶಾಂತವಾಗಿರುವ ರಾಮನಗರ ಇನ್ನು ನಗರವಾಗಿ ಬದಲಾಗುವುದರಿಂದ ಟ್ರಾಫಿಕ್, ವಾತಾವರಣ ಹಾಳಾಗಬಹುದು.
-ಇಲ್ಲಿ ಈಗಾಗಲೇ ಕೃಷಿಯನ್ನು ನೆಚ್ಚಿಕೊಂಡಿರುವ ರೈತರು, ಭೂ ಮಾಲಿಕರಿಗೆ ತೊಂದರೆಯಾಗಬಹುದು.
-ಕೈಗಾರೀಕರಣದಿಂದಾಗಿ ಕೃಷಿ ನಶಿಸಿ, ವಾತಾವರಣ ಹಾಳಾಗಬಹುದು.
-ರಸ್ತೆ, ಮೂಲಸೌಕರ್ಯಾಭಿವೃದ್ಧಿಗಾಗಿ ಹಲವರು ಭೂಮಿ ಕಳೆದುಕೊಳ್ಳಬಹುದು.