Select Your Language

Notifications

webdunia
webdunia
webdunia
webdunia

ಬಾವಿ ನೀರಿನ ವಿವಾದ: ವ್ಯಕ್ತಿಯೊಬ್ಬನಿಗೆ ನಾಲ್ವರಿಂದ ಹಿಗ್ಗಾಮುಗ್ಗಾ ಥಳಿತ

ಬಾವಿ ನೀರಿನ ವಿವಾದ: ವ್ಯಕ್ತಿಯೊಬ್ಬನಿಗೆ ನಾಲ್ವರಿಂದ ಹಿಗ್ಗಾಮುಗ್ಗಾ ಥಳಿತ
ಚಿಕ್ಕೋಡಿ , ಮಂಗಳವಾರ, 30 ಅಕ್ಟೋಬರ್ 2018 (18:32 IST)
ಬಾವಿ ನೀರಿಗಾಗಿ  ನಾಲ್ಕು ಜನರಿಂದ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ವರದಿಯಾಗಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅರಟಾಳ ಗ್ರಾಮದ ಅಶೋಕ ಸಾಲುಂಕೆ   ಎನ್ನುವವರಗೆ  ಪಕ್ಕದ ಜಮೀನಿನ ಮಾಲಿಕರಿಂದ ಥಳಿತವಾಗಿದೆ.

ರಮೇಶ ಅಪ್ಪಸಾಬ ಜಾಧವ ಇವರಿಂದ  ಅಶೋಕ ಸಾಲುಂಕೆಗೆ ಥಳಿತವಾಗಿದೆ. ಅರಟಾಲ ಗ್ರಾಮ ತೋಟದ ಮನೆಗಳು 
 ಜಮೀನಿನಲ್ಲಿರುವ ಬಾವಿಯಿಂದ ಕಲುಷಿತ ನೀರು ಹೋರ ಹಾಕಿದ ವಿಚಾರವಾಗಿ ಹಲ್ಲೆ ನಡೆಸಲಾಗಿದೆ.  

ರಮೇಶ ಜಾಧವ  ಜಮೀನಿಗೆ ನೀರು ನುಗ್ಗಿದೆ. ಇದರಿಂದ  ಮಾತಿನ ಚಕಮಕಿ  ನಡೆದು, ನಾಲ್ಕು ಜನರಿಂದ ಅಶೋಕ ಸಾಲುಂಕೆಗೆ ಹಿಗ್ಗಾ ಮುಗ್ಗಾ ಥಳಿಸಲಾಗಿದೆ.

ಹಲ್ಲೆಗೊಳಗಾದ ಅಶೋಕ ಸಾಲುಂಕೆ ಮಾಹಾರಾಷ್ಟರದ ಮಿರಜಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ. ರಮೇಶ ಅಣ್ಣಾಪ್ಪಾ ಜಾಧವ, ಮೋಹನ ಅಣ್ಣಾಪ್ಪಾ ಜಾಧವ,  ರೇಖಾ ಅಣ್ಣಾಪ್ಪಾ ಜಾಧವ, ಶೋಭಾ  ಜಾಧವ ನಾಲ್ಕು ಜನರ ಮೇಲೆ ಪ್ರಕರಣ ದಾಖಲು ಆಗಿದೆ. ಐಗಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು,  ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಸತ್ತವರ ಹೆಸರಲ್ಲೂ ಪ್ರಧಾನ ಮಂತ್ರಿ ಅವಾಸ್ ಯೋಜನೆ ಹಣ ಗುಳುಂ