Publish Date: Wed, 29 Apr 2020 (15:58 IST)
Updated Date: Wed, 29 Apr 2020 (16:00 IST)
ಡೆಡ್ಲಿ ಕೊರೊನಾ ವೈರಸ್ ಜೊತೆಗೆ ಹೋರಾಟ ನಡೆಸಿ ಗೆದ್ದು ಬಂದವನಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.
ಕೊರೊನಾ ಮಾರಿಯನ್ನು ಗೆದ್ದುಬಂದ ನಂಜನಗೂಡು ಜುಬಿಲಿಯಂಟ್ ಕಾರ್ಖಾನೆಯ ನೌಕರನಿಗೆ ಮಂಡ್ಯದ ಸ್ವರ್ಣಸಂದ್ರ ಬಡಾವಣೆಯಲ್ಲಿ ಸ್ವಾಗತ ಕೋರಲಾಯಿತು.
ಸ್ವರ್ಣಸಂದ್ರ ಬಡಾವಣೆಯ 33 ವಾರ್ಡ್ ನ ನಿವಾಸಿಯೂ ಆದ ಜುಬಿಲಿಯಂಟ್ ಕಾರ್ಖಾನೆಯ ನೌಕರನಿಗೆ ಬಡಾವಣೆಯ ನಿವಾಸಿಗಳು ಆರತಿ ಬೆಳಗಿ ಬರಮಾಡಿಕೊಂಡರು.
ಸಹೋದ್ಯೋಗಿಯ ಸಂಪರ್ಕದಿಂದಾಗಿ ಕೊರೊನಾ ಸೋಂಕು ತಗುಲಿ ಮಂಡ್ಯದ ಮಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಈತ ಈಗ ಸಂಪೂರ್ಣ ಗುಣಮುಖನಾಗಿದ್ದಾನೆ. ಕುಟುಂಬಸ್ಥರು ಆರತಿ ಬೆಳಗಿದರೆ, ಸುತ್ತಮುತ್ತಲಿನ ಜನರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.