Select Your Language

Notifications

webdunia
webdunia
webdunia
webdunia

ಮಹಿಳೆಯರ ಜೊತೆ ಲೈಂಗಿಕ ಕ್ರಿಯೆ ನಡೆಸುವ ಕೆಲಸವಿದೆ ಎಂದು ವೆಬ್ ಸೈಟ್ ನಲ್ಲಿ ವಂಚನೆ

ಮಹಿಳೆಯರ ಜೊತೆ ಲೈಂಗಿಕ ಕ್ರಿಯೆ ನಡೆಸುವ ಕೆಲಸವಿದೆ ಎಂದು ವೆಬ್ ಸೈಟ್ ನಲ್ಲಿ ವಂಚನೆ
ಬೆಂಗಳೂರು , ಮಂಗಳವಾರ, 14 ಜುಲೈ 2020 (09:46 IST)
Normal 0 false false false EN-US X-NONE X-NONE

ಬೆಂಗಳೂರು : ಮಹಿಳೆಯರ ಜೊತೆ ಲೈಂಗಿಕ ಕ್ರಿಯೆ ನಡೆಸುವ ಕೆಲಸ ಇದೆ ಎಂದು ನಂಬಿಸಿ ಟೆಕ್ಕಿಯೊಬ್ಬರಿಗೆ ಹಣ ವಂಚಿಸಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
 


ಅಮೃತ್ ಹಳ್ಳಿ ನಿವಾಸಿ 26 ವರ್ಷದ  ಸಾಫ್ಟ್ ವೇರ್ ಉದ್ಯೋಗಿಯೊಬ್ಬ ಲಾಕ್ ಡೌನ್ ಹಿನ್ನಲೆಯಲ್ಲಿ ಅವರ ಕಂಪೆನಿಯಲ್ಲಿ ಕೆಲಸದಿಂದ ತೆಗೆದುಹಾಕುವ ಆತಂಕದಿಂದ ವೆಬ್ ಸೈಟ್ ಗಳಲ್ಲಿ ಬೇರೆ ಕೆಲಸ ಹುಡುಕಾಡುತ್ತಿದ್ದರು. ಆ ವೇಳೆ ವೆಬ್ ಸೈಟ್ ಒಂದಕ್ಕೆ ಕರೆ ಮಾಡಿದಾಗ ಮಹಿಳೆಯರ ಜೊತೆ ಲೈಂಗಿಕ ಕ್ರಿಯೆ ನಡೆಸುವ ಕೆಲಸವಿದೆ. ಅದಕ್ಕೆ ವೇತನ ಕೂಡ ನೀಡಲಾಗುವುದು ಎಂದು ತಿಳಿಸಿದ್ದರು.

ಇದಕ್ಕೆ ಟೆಕ್ಕಿ ಒಪ್ಪಿದಾಗ ಆತನಿಂದ ಕಂಪೆನಿ ಸದಸ್ಯತ್ವ, ನೊಂದಣಿ ಶುಲ್ಕ ವೆಂದು ಒಟ್ಟು 83,500 ರೂ ತೆಗೆದುಕೊಂಡಿದ್ದಾರೆ. ಆದರೆ ಕೊನೆಗೂ ಉದ್ಯೋಗ ನೀಡದೆ ವಂಚಿಸಿದ್ದಾರೆ. ಈ ಬಗ್ಗೆ ಟೆಕ್ಕಿ ಈಶಾನ್ಯ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಎಲ್ಲೆಲ್ಲಿ ವೀಕ್ಷಿಸಬಹುದು? ಲಿಂಕ್ ಇಲ್ಲಿದೆ ನೋಡಿ