Select Your Language

Notifications

webdunia
webdunia
webdunia
webdunia

ಪಕ್ಷಕ್ಕೆ ಡ್ಯಾಮೇಜ್ ಆದ್ರೂ ಖಾಲಿ ಸ್ಥಾನ ತುಂಬಲು ಪ್ರಯತ್ನಿಸುತ್ತೇವೆ : ಬೊಮ್ಮಾಯಿ

ಪಕ್ಷಕ್ಕೆ ಡ್ಯಾಮೇಜ್ ಆದ್ರೂ ಖಾಲಿ ಸ್ಥಾನ ತುಂಬಲು ಪ್ರಯತ್ನಿಸುತ್ತೇವೆ : ಬೊಮ್ಮಾಯಿ
ರಾಯಚೂರು , ಭಾನುವಾರ, 16 ಏಪ್ರಿಲ್ 2023 (17:50 IST)
ರಾಯಚೂರು : ಬಿಜೆಪಿಯ ಕೆಲವು ಮುಖಂಡರು ಪಕ್ಷ ತೊರೆಯುತ್ತಿರುವುದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೂ ಬಿಜೆಪಿ ಬಹುಮತದೊಂದಿಗೆ ಅಧಿಕಾರ ರಚಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
 
ರಾಯಚೂರಿನಲ್ಲಿ ಆಯೋಜಿಸಿದ್ದ ಪರಿಶಿಷ್ಟ ಸಮುದಾಯಗಳ ಅಭಿನಂದನಾ ಸಮಾವೇಶಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಪಕ್ಷ ಬಲಿಷ್ಠ ಆಗಿರುವುದರಿಂದ ಅವರ ಸ್ಥಾನ ತುಂಬಲು ಪ್ರಯತ್ನಿಸುತ್ತೇನೆ. ಜನ ಬೆಂಬಲ, ಕಾರ್ಯಕರ್ತರಿಂದ ಪಕ್ಷ ಕಟ್ಟಿದ್ದೇವೆ.

ಕೆಲವು ಬದಲಾವಣೆ ಮೂಲಕ ಮುಂದಿನ ಪೀಳಿಗೆಗೆ ಅನುಕೂಲ ಮಾಡಲು ಈ ಬದಲಾವಣೆ ಮಾಡಲಾಗುತ್ತಿದೆ. ಕಾಂಗ್ರೆಸ್ನಲ್ಲಿ ಬದಲಾವಣೆ ಮಾಡಿಲ್ಲ. ಅಲ್ಲಿ ಜಡತ್ವವಿದೆ. ಅಲ್ಲಿ ಎಷ್ಟೇ ವಯಸ್ಸಾದರೂ ಬೇಡ ಎನ್ನುವುದಿಲ್ಲ. ಖುದ್ದು ಆಕಾಂಕ್ಷಿ ಹೇಳುವವರೆಗೂ ಅದು ನಡೆಯುತ್ತದೆ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿಯ ಶಿರಚ್ಛೇದ ಮಾಡಿದ ಮಗ ! ಮರಣದಂಡನೆ ವಿಧಿಸಿದ ಕೋರ್ಟ್