Publish Date: Sat, 15 Apr 2023 (07:44 IST)
Updated Date: Sat, 15 Apr 2023 (09:45 IST)
ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿಯವರು ವಿಧಾನಸಭಾ ಚುನಾವಣೆಗೆ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಸ್ಪರ್ಧಿಸಲಿದ್ದಾರೆ. ಈ ಹಿನ್ನೆಲೆ ಸಿಎಂ ಶನಿವಾರ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.
ಈಗಾಗಲೇ ಬೊಮ್ಮಾಯಿಯವರು ತಮ್ಮ ನಾಮಪತ್ರ ಸಲ್ಲಿಸಲು ಶಿಗ್ಗಾಂವಿ ಪ್ರಯಾಣದಲ್ಲಿದ್ದಾರೆ. ಬೆಂಗಳೂರಿನ ಆರ್ಟಿ ನಗರ ನಿವಾಸದಿಂದ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಅವರು ತೆರಳಿದ್ದಾರೆ.
ವಿಶೇಷ ವಿಮಾನದ ಮೂಲಕ ಸಿಎಂ ಹುಬ್ಬಳ್ಳಿಗೆ ತೆರಳಲಿದ್ದು, ಬಳಿಕ ಅಲ್ಲಿಂದ ಶಿಗ್ಗಾಂವಿಗೆ ರಸ್ತೆ ಮಾರ್ಗದ ಮೂಲಕ ತೆರಳಲಿದ್ದಾರೆ. ಸಿಎಂ 11 ಗಂಟೆ ವೇಳೆಗೆ ತಮ್ಮ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.