Select Your Language

Notifications

webdunia
webdunia
webdunia
webdunia

ಯಾವ ಬಂಡಾಯಕ್ಕೆ ಹೆದರಬೇಡಿ : ಬೊಮ್ಮಾಯಿಗೆ ಹೈಕಮಾಂಡ್ ಭರವಸೆ

ಬಸವರಾಜ ಬೊಮ್ಮಾಯಿ
ಬೆಂಗಳೂರು , ಬುಧವಾರ, 12 ಏಪ್ರಿಲ್ 2023 (13:05 IST)
ಬೆಂಗಳೂರು : “ಬಂಡಾಯಕ್ಕೆ ಬೆದರಬೇಡಿ, ಅತೃಪ್ತರನ್ನು ನಾವು ನೋಡಿಕೊಳ್ಳುತ್ತೇವೆ”- ಇದು ಬಿಜೆಪಿ ಹೈಕಮಾಂಡ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದ ಭರವಸೆ.
 
ಕರ್ನಾಟಕ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಸಂಬಂಧ ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನಿವಾಸದಲ್ಲಿ ನಡೆದಿತ್ತು. ಈ ವೇಳೆ ಪ್ರಮುಖ ನಾಯಕರನ್ನು ಕೈ ಬಿಡುವ ಪ್ರಸ್ತಾಪ ಬಂದಾಗ ಬೊಮ್ಮಾಯಿ ಬಂಡಾಯದ ಆತಂಕ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಸಹ ಉಸ್ತುವಾರಿ ಮನ್ಸುಖ್ ಮಾಂಡವೀಯ, ಬಂಡಾಯವನ್ನು ನಾವು ನೋಡಿಕೊಳ್ಳುತ್ತೇವೆ. ಗುಜರಾತ್ನಲ್ಲಿ ನಾವು ಈ ಸನ್ನಿವೇಶ ಎದುರಿಸಿಯೂ ಯಶಸ್ವಿಯಾಗಿದ್ದೇವೆ. ಕರ್ನಾಟಕದಲ್ಲೂ ಇದನ್ನು ನಿಭಾಯಿಸೋಣ ಎಂದಿದ್ದಾರೆ. 

ಮಾಂಡವೀಯ ಮಾತನ್ನು ಜೆ.ಪಿ ನಡ್ಡಾ ಬೆಂಬಲಿಸಿದ್ದಾರೆ. ಪ್ರಮುಖ ನಾಯಕರನ್ನು ನಾವು ನಿಭಾಯಿಸುತ್ತೇವೆ. ಉಳಿದವರನ್ನು ನೀವು ನೋಡಿಕೊಳ್ಳಿ. ಪ್ರಮುಖ ನಾಯಕರು ಸುಮ್ಮನಾದರೆ ಉಳಿದವರು ಸುಮ್ಮನಾಗುತ್ತಾರೆ ಎಂದು ಹೈಕಮಾಂಡ್ ನಾಯಕರು ಸಿಎಂಗೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನ ನನ್ನನ್ನು ತೇಲು ಅಂದ್ರೆ ತೇಲುತ್ತೇನೆ, ಮುಳುಗು ಅಂದ್ರೆ ಮುಳುಗುತ್ತೇನೆ : ಸವದಿ