Publish Date: Fri, 22 Dec 2023 (16:00 IST)
Updated Date: Fri, 22 Dec 2023 (16:03 IST)
ಶಾಲಾ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ನಾನು ಮೂರು ಗಂಟೆಗೆ ಮೀಟಿಂಗ್ ಕರೆದಿದ್ದೇನೆ.ಈ ವಿಚಾರ ನನಗೆ ಗೊತ್ತಾಗಿದೆ.ವಾಸ್ತವ ವರದಿಯನ್ನ ತರಿಸಿಕೊಳ್ತಿನಿ.ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ.ಇತ್ತೀಚೆಗೆ ಆದ ಘಟನೆ ಬಗ್ಗೆಯೂ ಕ್ರಮ ತೆಗೆದುಕೊಂಡಿದ್ದೇವೆ.ಮಕ್ಕಳನ್ನ ಯಾವ ರೀತಿ ಬಳಸಿಕೊಳ್ಳಬೇಕು, ಅವರಿಗೆ ಹೇಗೆ ಶಕ್ತಿ ತುಂಬ ಬೇಕು ಆ ಕೆಲಸ ಮಾಡಬೇಕು.
ನಾವು ಶಾಲೆಗಳಲ್ಲಿ ಕಮಿಟಿ ಇದೆ.ಮಕ್ಕಳನ್ನ ಯಾರೂ ದುರುಪಯೋಗ ಮಾಡಿಕೊಳ್ಳಬಾರದು.ಹಿಂದೆಲ್ಲಾ ಎನ್.ಎಸ್.ಎಸ್ ಎಲ್ಲಾ ಇತ್ತು.ಗಿಡ ನೆಡುವುದು, ಸ್ವಚ್ಚತೆ ಮಾಡುವ ಕೆಲಸ ಮಾಡ್ತಿದ್ದರು.ಆದರೆ ಶೌಚಾಲಯ ಯಾರೂ ಕ್ಲೀನ್ ಮಾಡಿಸುವ ಅಧಿಕಾರ ಯಾರಿಗೂ ಕೊಟ್ಟಿಲ್ಲ.ಆ ಅವಕಾಶ ಕೂಡ ಯಾರಿಗೂ ಇಲ್ಲ.ಮುಂದೆ ಯಾವ ಕ್ರಮ ಕೈಗೊಳ್ಳಬೇಕೋ ಕೈಗೊಳ್ಳುತ್ತೇವೆ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.