ಮಳಲಿ ಮಸೀದಿಯನ್ನೂ ವಾಪಾಸ್ ಪಡೆಯುತ್ತೇವೆ : ಮುತಾಲಿಕ್

Webdunia
ಶನಿವಾರ, 28 ಮೇ 2022 (11:57 IST)
ಮೈಸೂರು : ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ತೆಗೆದು ರಾಮ ಮಂದಿರ ಮರಳಿ ಕಟ್ಟಿದ ರೀತಿಯಲ್ಲಿ ಮಳಲಿ ಮಸೀದಿಯ ಜಾಗದಲ್ಲೂ ಮೂಲ ದೇವಸ್ಥಾನ ನಿರ್ಮಿಸುತ್ತೇವೆ.

ತಾಕತ್ ಇದ್ದರೆ ತಡೆಯಿರಿ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ. ಮಳಲಿ ಮಸೀದಿ ಬಿಟ್ಟು ಕೊಡುವುದು ಕನಸಿನ ಮಾತು ಎಂಬ ಎಸ್ಡಿಪಿಐ ರಾಜ್ಯಾಧ್ಯಕ್ಷನ ಮಾತಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ರಾಜ್ಯದ 30 ಸಾವಿರ ಮಸೀದಿಗಳ ಮೂಲದಲ್ಲಿ ದೇವಸ್ಥಾನಗಳಿವೆ. ಅವುಗಳನ್ನು ವಾಪಸ್ ಪಡೆದೇ ತೀರುತ್ತೇವೆ. ಎಸ್ಡಿಪಿಐಗೆ ತಾಕತ್ ಇದ್ದರೆ ಅದನ್ನು ತಡೆಯಲಿ. ಇದು ನನ್ನ ಸವಾಲು ಎಂದರು. 

ಮಳಲಿಯ ಮಸೀದಿಯಲ್ಲಿ ಹಿಂದೂ ದೇವಸ್ಥಾನದ ಕುರುಹು ಪತ್ತೆಯಾಗಿದೆ. ಅದನ್ನು ವಾಪಸ್ ಪಡೆದೇ ಪಡೆಯುತ್ತೇವೆ. ಎಲ್ಲಾ ಮಸೀದಿಗಳನ್ನು ದೇವಾಲಯ ಒಡೆದು ಕಟ್ಟಲಾಗಿದೆ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಒಡೆದು ರಾಮ ಮಂದಿರ ಕಟ್ಟಿದ ರೀತಿ ಮಳಲಿ ಮಸೀದಿಯನ್ನು ಪಡೆಯುತ್ತೇವೆ ಎಂದರು.

ಅನುಭವ ಮಂಟಪದ ಪವಿತ್ರ ಸ್ಥಾನ ಈಗ ಅಪವಿತ್ರವಾಗಿದೆ. ಪೀರ್ ಪಾಷಾ ಬಂಗ್ಲೆಯನ್ನು ಅನುಭವ ಮಂಟಪವಾಗಿ ಮತ್ತೆ ಬದಲಾಯಿಸಬೇಕು. ಈ ನಿಟ್ಟಿನಲ್ಲಿನ ಜೂನ್ 12 ರ ಹೋರಾಟಕ್ಕೆ ಶ್ರೀರಾಮ ಸೇನೆ ಬೆಂಬಲವಿದೆ ಎಂದರು. 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿ ವಿದೇಶದಲ್ಲಿ ಕುಟುಂಬವನ್ನು ಹೊಂದಿದ್ದಾರಾ, ಹರಿದಾಡುತ್ತಿರುವ ವಿಡಿಯೋ ಹಿಂದಿನ ಅಸಲಿಯತ್ತೇನು

ಮಂತ್ರಾಲಯ, ರಸ್ತೆ ಅಪಘಾತದಲ್ಲಿ ಮಂಗಳೂರು ಹಾಪ್‌ಕಾಮ್ಸ್‌ನ ರವಿ ಶೆಟ್ಟಿ ನಿಧನ

ಸಿಕ್ಕಿಂ: ನಿರ್ಮಾಣ ಹಂತದ ಸುರಂಗ ಕುಸಿದು 8 ಮಂದಿ ಕಾರ್ಮಿಕರು ಸಾವು

ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡ್ತಾರೆ, ರಾಕ್ಷಸರು: ಸಚಿವ ಧರ್ಮೇಂದ್ರ ಪ್ರಧಾನ್ ಮುಂದೆಯೇ ರೇಣುಕಾ ಚೌಧರಿ ವಾಗ್ದಾಳಿ Video

ಆಡಳಿತಾಧಿಕಾರಿ ಜೊತೆ ಕಾರಿನಲ್ಲಿದ್ದ ಪತ್ನಿ: ರಸ್ತೆಯಲ್ಲೇ ಹೈಡ್ರಾಮಾ ಮಾಡಿದ ಪತಿ Video

ಮುಂದಿನ ಸುದ್ದಿ
Show comments