ವಿಧಾನಸೌಧದಲ್ಲಿ ಕೃಷ್ಣ ಬೈರೇಗೌಡ ಬರಪೀಡಿತ ವಿಷಯವಾಗಿ ಚರ್ಚೆ ನಡೆಸಿದ್ದು,195 ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಈ ಬಾರಿ ಆಹಾರ ಕೊರತೆ ನಮಗೆ ಆಗುತ್ತೆ.ಯಾವುದು ಎಷ್ಟು ಅಂತ ಲೆಕ್ಕ ಹಾಕುತ್ತಿದ್ದೇವೆ.ಹಿಂಗಾರು ಕೂಡ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ.ರಾಜ್ಯದಲ್ಲಿ ೨೮% ಮಳೆ ಕೊರತೆಯಾಗಿದೆ.ನಾವು ಕೊಟ್ಟ ಬರದ ವರದಿ ಬಗ್ಗೆ ಕೇಂದ್ರ ಅಧಿಕಾರಿಗಳು ಗುಡ್ ಅಂದಿದ್ದಾರೆ.ಅವರು ಕೇಳಿದ ಎಲ್ಲ ಅಂಕಿ ಅಂಶಗಳನ್ನು ನಾವು ಕೊಟ್ಟಿದ್ದೇವೆ.ಮಳೆ ಅಳತೆ ಮಾಡುವ ವ್ಯವಸ್ಥೆ ನಮ್ಮಲ್ಲಿ ಚೆನ್ನಾಗಿದೆ.ನಿಖರವಾದ ಅಂಕಿಅಂಶಗಳನ್ನು ನಾವು ಕೊಟ್ಟಿದ್ದೇವೆ.೪೮೦೦ ಕೋಟಿ ಪರಿಹಾರ ನಾವು ಕೇಳಿದ್ದೇವೆ.ಮಾರ್ಗಸೂಚಿ ಪ್ರಕಾರ ನಾವು ಇಷ್ಟೇ ಪರಿಹಾರ ಕೇಳಲು ಆಗುವುದು.ರಾಜ್ಯ ಮಾತ್ರ ಮೊದಲು ಬರ ಘೋಷಣೆ ಮಾಡಿದ್ದೇವೆ.ನಮಗಿಂತ ಹೆಚ್ಚು ಮಳೆ ಕೊರತೆ ಬೇರೆ ರಾಜ್ಯದಲ್ಲಿ ಇದೆ.ಆದ್ರೆ ಬರ ನಾವುಮಾತ್ರ ಘೋಷಣೆ ಮಾಡಿದ್ದು.ನಾವು ಬರದ ಬಗ್ಗೆ ಹೆಚ್ಚು ಗಮನ ಹರಿಸಿದ್ದೇವೆ.ನ್ಯಾಯೂತವಾಗಿ ಕೇಂದ್ರ ಸರ್ಕಾರ ಸ್ಪಂದಿಸುವ ಕೆಲಸ ಕೇಂದ್ರ ಮಾಡುತ್ತೆ.ನಮ್ಮ ಮನವಿಗೆ ಸ್ಪಂದನೆ ಮಾಡ್ತಾರೆ ಎಂಬ ಭರವಸೆ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.