Publish Date: Thu, 27 Apr 2023 (11:39 IST)
Updated Date: Thu, 27 Apr 2023 (10:41 IST)
ಗದಗ : ನಮಗೆ ರಾಹುಲ್ ಗಾಂಧಿ ರಕ್ತದ ಬಗ್ಗೆ ಸಂಶಯಗಳಿದ್ದಾವೆ. ರಾಹುಲ್ ಗಾಂಧಿ ಯಾವ ಹೋರಾಟದವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದರು.
ಸ್ವಾತಂತ್ರ್ಯಕ್ಕಾಗಿ ಬಿಜೆಪಿ ಕೊಡುಗೆ ಶೂನ್ಯ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಖಾರವಾಗಿ ಮಾತನಾಡಿದರು. ನಮಗೆ ರಾಹುಲ್ ಗಾಂಧಿ ರಕ್ತದ ಬಗ್ಗೆ ಸಂಶಯಗಳಿವೆ. ರಾಹುಲ್ ಗಾಂಧಿ ಯಾವ ಹೋರಾಟದವರು? ಗಾಂಧಿ ಅಂತ ಹೇಳುವಂಥದ್ದು ರಾಹುಲ್ ಗಾಂಧಿಗೆ ಹೇಗೆ ಬಂತು ಎಂಬುದನ್ನು ವಿವರಣೆ ನೀಡಲಿ.
224 ಕ್ಷೇತ್ರಕ್ಕೂ ರಾಹುಲ್ ಗಾಂಧಿ ಪ್ರವಾಸ ಮಾಡಬೇಕು. ಇಡೀ ದೇಶದಲ್ಲಿ ಎಲ್ಲೆಲ್ಲಿ ರಾಹುಲ್ ಗಾಂಧಿ ಪ್ರವಾಸ ಮಾಡಿದ್ದಾರೋ, ಅಲ್ಲಲ್ಲಿ ಕಾಂಗ್ರೆಸ್ ಸೋತಿದೆ ಎಂದು ಕುಟುಕಿದರು.
ಶೆಟ್ಟರ್ಗೆ ಬಿಜೆಪಿ ಗೌರವ, ಅಧಿಕಾರ ಎಲ್ಲವನ್ನೂ ಕೊಟ್ಟಿದೆ. ಈಗ ಅವರು ಕಾಂಗ್ರೆಸ್ ಸೇರಿದ್ದಾರೆ. ಅವರ ವಿರುದ್ಧ ಬಿಜೆಪಿ ಗೆಲ್ಲಲೇಬೇಕು. ಕೌರವರು ಮತ್ತು ಪಾಂಡವರ ಯುದ್ಧ ಮಾಡಲೇಬೇಕು. ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ ಅನಿವಾರ್ಯ ಎಂದರು.