Publish Date: Thu, 27 Apr 2023 (10:35 IST)
Updated Date: Thu, 27 Apr 2023 (10:37 IST)
ಪಾಟ್ನಾ : ಬಿಹಾರದ ಅರ್ವಾಲ್ ಜಿಲ್ಲೆಯ ವ್ಯಕ್ತಿಯೊಬ್ಬ ಬರೋಬ್ಬರಿ 40 ಪತ್ನಿಯರನ್ನು ಹೊಂದುವ ಮೂಲಕ ಸುದ್ದಿಯಾಗಿದ್ದಾನೆ.
ಬಿಹಾರದ ಅಗರ್ವಾಲ್ ಜಿಲ್ಲೆಯ ರೆಡ್ಲೈಟ್ ಏರಿಯಾದಲ್ಲಿ ಜಾತಿ ಗಣತಿ ನಡೆಸಲಾಗಿತ್ತು. ಈ ವೇಳೆ 40 ಮಹಿಳೆಯರು ಹೇಳಿದ ಉತ್ತರ ಕೇಳಿ ಅಧಿಕಾರಿಗಳು ಒಮ್ಮೆಲೇ ಶಾಕ್ ಆಗಿದ್ದಾರೆ. 40 ಮಹಿಳೆಯರು ರೂಪಚಂದ್ ಎಂಬಾತನನ್ನು ತಮ್ಮ ಪತಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರ ಮಕ್ಕಳು ಕೂಡ ರೂಪಚಂದ್ ಹೆಸರನ್ನು ತಮ್ಮ ತಂದೆಯ ಹೆಸರಾಗಿ ಬರೆದಿದ್ದಾರೆ.
ವರದಿಗಳ ಪ್ರಕಾರ, ವಾರ್ಡ್ ಸಂಖ್ಯೆ 7ರ ರೆಡ್ಲೈಟ್ ಏರಿಯಾದಲ್ಲಿ ವಾಸಿಸುವ ಜನರು ಜೀವನಕ್ಕಾಗಿ ಹಾಡುತ್ತಾರೆ ಹಾಗೂ ನೃತ್ಯ ಮಾಡುತ್ತಾರೆ. ಆದರೆ ಇವರ್ಯಾರಿಗೂ ಸ್ಥಿರ ವಿಳಾಸವಿಲ್ಲ. ಇದರಿಂದಾಗಿ ಈ ಮಹಿಳೆಯರು ತಮ್ಮ ಪತಿಗೆ ರೂಪಚಂದ್ ಎಂದು ಹೆಸರಿಸಿದ್ದಾರೆ. ಈ ಘಟನೆ ಸುತ್ತಮುತ್ತಲ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ.