Publish Date: Wed, 20 Nov 2019 (10:42 IST)
Updated Date: Wed, 20 Nov 2019 (10:45 IST)
ಮಂಡ್ಯ : ಮಂಡ್ಯದಲ್ಲಿ ಸಂಸದೆ ಸುಮಲತಾ ಬೆಂಬಲ ಕೊಡುವ ವಿಚಾರ ಸುಮಲತಾ ಸಹಕಾರ ನಮಗೆ ಸಿಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ ವೈ, ಮಂಡ್ಯದಲ್ಲಿ ಸುಮಲತಾ ಜೊತೆ ನಾನು ಮಾತನಾಡಿದ್ದೇನೆ. ಹಿಂದಿನ ಚುನಾವಣೆ ವೇಳೆ ಅವರಿಗೆ ನಾವು ಸಹಕಾರ ಕೊಟ್ಟಿದ್ವಿ. ಕೆಆರ್ ಪೇಟೆ ಕಾರ್ಯಕರ್ತರ ಸಭೆಗೆ ಅವರು ಬಂದು ಕುಳಿತಿದ್ರು. ಮತ್ತೊಮ್ಮೆ ಸುಮಲತಾ ಅವರೊಂದಿಗೆ ಮಾತನಾಡ್ತೇನೆ. ಅವರ ಸಹಕಾರ ನಮಗೆ ಸಿಗುತ್ತೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಆದರೆ ಸುಮಲತಾ ಅವರು ತಾವು ಯಾರಿಗೆ ಬೆಂಬಲ ನೀಡುತ್ತಾರೆ ಎಂಬ ಬಗ್ಗೆ ಇನ್ನು ಗುಟ್ಟು ಬಿಟ್ಟುಕೊಟ್ಟಿಲ್ಲ. ಅವರ ಬೆಂಬಲಕ್ಕಾಗಿ ಪಕ್ಷಗಳು ಕಾದುಕುಳಿತಿವೆ ಎನ್ನಲಾಗಿದೆ.