Select Your Language

Notifications

webdunia
webdunia
webdunia
webdunia

ಸುಮಲತಾ ಬೆಂಬಲ ಯಾರಿಗೆ?

ಸುಮಲತಾ ಬೆಂಬಲ ಯಾರಿಗೆ?
ಮಂಡ್ಯ , ಮಂಗಳವಾರ, 19 ನವೆಂಬರ್ 2019 (10:41 IST)
ಮಂಡ್ಯ : ಕೆ.ಆರ್ ಪೇಟೆ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಸಂಸದೆ ಸುಮಲತಾ ಬೆಂಬಲ ಯಾರಿಗೆ? ಕಾಂಗ್ರೆಸ್ ಗೆ ಬೆಂಬಲ ನೀಡಲಿದ್ದಾರಾ? ಅಥವಾ ಬಿಜೆಪಿಗೆ ಬೆಂಬಲ ನೀಡಲಿದ್ದಾರಾ? ಎಂಬ ವಿಚಾರ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.




ಸದ್ಯ ಮಂಡ್ಯ ಜಿಲ್ಲೆಯ ಸ್ಟಾರ್ ಪ್ರಚಾರಕಿ ಆಗಿರುವ ಸುಮಲತಾ ಪ್ರಚಾರದ ನಿರೀಕ್ಷೆಯಲ್ಲಿ ಎರಡು ಪಕ್ಷದ ಅಭ್ಯರ್ಥಿಗಳು ಕಾದುಕುಳಿತಿದ್ದು, ಆದರೆ ಸುಮಲತಾ ಬೆಂಬಲ ವಿಚಾರವನ್ನು ಇನ್ನೂ ನಿಗೂಢವಾಗಿ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.


ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದ್ರೂ, ಸುಮಲತಾ ಇನ್ನು ಬೆಂಬಲದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಬೆಂಬಲದ ಬಗ್ಗೆ ಜನಾಭಿಪ್ರಾಯ ಕೇಳಿ ನಿರ್ಧರಿಸುವುದಾಗಿ ಹೇಳಿದ ಸಂಸದೆ ಇದುವರೆಗೂ ಜನಾಭಿಪ್ರಾಯ ಕೇಳಿಲ್ಲ, ಹಾಗಾದ್ರೆ ಸುಮಲತಾ  ಯಾವ ಪಕ್ಷದ ಋಣ ತೀರಿಸುತ್ತಾರೆ? ತಟಸ್ಥರಾಗಿ ಉಳೀತಾರಾ, ಒಂದು ಪಕ್ಷದ ಅಭ್ಯರ್ಥಿಯಾಗಿ ನಿಲ್ತಾರಾ? ಎಂಬ ಚರ್ಚೆ ಎಲ್ಲಾ ಕಡೆ ಕೇಳಿಬರುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಆಗಿ ಮುಂದುವರಿಯಲು ಬಿಎಸ್ ವೈ ಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ