Select Your Language

Notifications

webdunia
webdunia
webdunia
webdunia

ನೀರು ಹಂಚಿಕೆ: ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಶಾಸಕ

ನೀರು ಹಂಚಿಕೆ: ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಶಾಸಕ
ತುಮಕೂರು , ಬುಧವಾರ, 26 ಡಿಸೆಂಬರ್ 2018 (17:11 IST)
ಹೇಮಾವತಿ ನೀರು ಹಂಚಿಕೆ ಯಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಬಿಜೆಪಿ ಶಾಸಕರ ಆರೋಪಕ್ಕೆ ಶಾಸಕರೊಬ್ಬರು ತಿರುಗೇಟು ನೀಡಿದ್ದಾರೆ.

ತುಮಕೂರಿನಲ್ಲಿ ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಹೇಳಿಕೆ ನೀಡಿದ್ದು, ಜಿಲ್ಲೆಯ ಮೂವರು ಬಿಜೆಪಿ ಶಾಸಕರನ್ನು ಖುದ್ದಾಗಿ ನಾನೇ ಸಿಎಂಗೆ ಭೇಟಿ ಮಾಡಿಸಿದ್ದೇನೆ.

ತುಮಕೂರು ನಗರ ಶಾಸಕ  ಜ್ಯೋತಿಗಣೇಶ್, ತಿಪಟೂರು ಶಾಸಕ ಬಿ.ಸಿ. ನಾಗೇಶ್, ತುರುವೆಕರೆ ಶಾಸಕ ಮಸಾಲೆ ಜಯರಾಮ್ ರನ್ನ ಭೇಟಿ ಮಾಡಿಸಿದ್ದೇನೆ.

ಹೇಮಾವತಿ ನೀರು ಹರಿಸುವ  ವಿಚಾರವಾಗಿ ಕುಮಾರಣ್ಣನ ಬಳಿ ಮಾತನಾಡಿಸಿದ್ದೇನೆ. ಅಧಿವೇಶನ ಮುಗಿದ ಬಳಿಕ ತೆರಳಿ ಕರೆದುಕೊಂಡು ಹೋಗಿ ಮಾತನಾಡಿಸಿದ್ದೆ. ಒಂದು ತಿಂಗಳಿಂದ ಹೇಮಾವತಿ ನೀರು ನಿಲ್ಲಿಸಿದ್ದಾರೆ ಅಂತಾ ಕೇಳಿದ್ರು. ಅದಕ್ಕೆ ಕುಮಾರಣ್ಣನೇ  ಪ್ರಶ್ನೆ ಕೇಳಿದ್ರು. ಕೆ ಆರ್ ಎಸ್ ನಲ್ಲಿ‌ ನೀರಿದೆ. ಹೇಮಾವತಿ ನೀರು ಏನಾಯ್ತು ಅಂತಾ
ನಮಗೆ ಅದರ ಮಾಹಿತಿ ಇಲ್ಲಾ. ಜನರಿಗೆ ಉತ್ತರ ನೀಡಲು ಆಗುತ್ತಿಲ್ಲವೆಂದು ಹೇಳಿದೆ.

ಎರಡು ದಿನ ಟೈಂ ಕೊಡು ಬ್ರದರ್ ನಾನೆ  ನೀರಿನ ಸಮಸ್ಯೆ ಬಗೆ ಹರಿಸಿಕೊಡುತ್ತೇನೆ ಎಂದು ಪ್ರಾಮೀಸ್ ಮಾಡಿದ್ರು.
ಅದರಂತೆ ಅಧಿವೇಶನ ಮುಗಿದ ಬಳಿಕ ಎರಡು ದಿನದಲ್ಲಿ ನೀರು ಹರಿಸಿದ್ದಾರೆ ಎಂದರು.

ಸಿಎಂ ಕುಮಾರಸ್ವಾಮಿ, ಸಚಿವ ರೇವಣ್ಣ ತಾರತಮ್ಯ ಮಾಡುತ್ತಿದ್ದಾರೆ ಎಂದಿದ್ದ ಜಿಲ್ಲೆಯ ಬಿಜೆಪಿ ಶಾಸಕರ ಹೇಳಿಕೆಗೆ ಡಿ.ಸಿ.ಗೌರಿಶಂಕರ್ ತಿರುಗೇಟು ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಗೃಹರಕ್ಷಕ ದಳ ಮುಖ್ಯಸ್ಥರಿಗೆ ಶಹಬ್ಬಾಸ್ ಗಿರಿ ನೀಡಿದ ಶಾಸಕ!