Publish Date: Sun, 23 Dec 2018 (17:25 IST)
Updated Date: Sun, 23 Dec 2018 (17:26 IST)
ಮೈತ್ರಿ ಸರಕಾರದ ರಾಜ್ಯ ಸಚಿವ ಸಂಪುಟ ಪುನಃರಚನೆಯಲ್ಲಿ ಕೈಬಿಟ್ಟಿರುವುದಕ್ಕೆ ತೀವ್ರ ಅಸಮಾಧಾನಗೊಂಡಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಕಾಂಗ್ರೆಸ್ ತೊರೆಯಲು ತೀರ್ಮಾನಿಸಿದ್ದಾರೆಂಬ ಸುದ್ದಿ ಬಲವಾಗಿ ಹರಿದಾಡಲಾರಂಭಿಸಿದೆ.
ಕಾಂಗ್ರೆಸ್ ಪಕ್ಷದಿಂದ ಹೊರ ಬರುವುದರ ಜೊತೆಗೆ ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ರಮೇಶ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜೀನಾಮೆ ಕೊಡುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಅವರು ತಿಳಿಸಿದ್ದಾರೆ ಎಂದು ಪಕ್ಷದ ಕಾರ್ಯಕರ್ತರ ಮೂಲದಿಂದ ತಿಳಿದುಬಂದಿದೆ.
ರಾಜೀನಾಮೆ ಕೊಡುವ ದಿನಾಂಕವನ್ನು ಇನ್ನೂ ನಿರ್ಧರಿಸಿಲ್ಲ. ಇಂದೇ ಕೊಡಬಹುದು ಅಥವಾ ನಾಳೆ ಕೊಡಬಹುದು ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.