Publish Date: Wed, 26 Dec 2018 (17:06 IST)
Updated Date: Wed, 26 Dec 2018 (17:11 IST)
ಗೃಹರಕ್ಷಕ ದಳ ದಿನಾಚರಣೆಯಂದು ಶಾಸಕರೊಬ್ಬರು ಗೃಹರಕ್ಷಕ ದಳದ ಮುಖ್ಯಸ್ಥರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶಹಬ್ಬಾಸ್ ಗಿರಿ ನೀಡಿದ ಪ್ರಸಂಗ ನಡೆದಿದೆ.
ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ. ರವಿ ಅವರು ಕೃಷ್ಣ ನಾಯ್ಕ ಅವರ ಕೆಲಸಕ್ಕೆ ಶಹಬ್ಬಾಸ್ ಗಿರಿ ನೀಡಿ ಗೌರವಿಸಿದರು. ಗೃಹರಕ್ಷಕ ದಳದ ತರಬೇತುದಾರರಾಗಿ ನೇಮಕಗೊಂಡಿರುವ ಕೃಷ್ಣಾ ನಾಯ್ಕ್ ಜಿಲ್ಲೆಯ ಎಲ್ಲ ಗೃಹರಕ್ಷಕ ದಳ ಸಿಬ್ಬಂದಿಗೆ ಉತ್ತಮ ತರಬೇತಿ ನೀಡಿರುವ ಹಿನ್ನೆಲೆಯಲ್ಲಿ ಗೌರವ ಸನ್ಮಾನವನ್ನು ಪಡೆಯುವುದರ ಮೂಲಕ ಮಾದರಿಯಾದರು.
ತಾವು ಮಾಡುವ ಕೆಲಸ ನಿರ್ವಹಣೆ ಹೇಗಿರಬೇಕು ಎಂದು ತಿಳಿದು ಅರಿತು ಮಾಡುವ ಕೆಲಸಕ್ಕೆ ಯಾವತ್ತಿದ್ದರೂ ಗೌರವ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಿಂದ ಕೆಲಸ ಮಾಡಿದ್ದಲ್ಲಿ ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚುವುದರ ಜೊತೆ ಸಾರ್ವಜನಿಕವಾಗಿಯೂ ಗುರುತಿಸಿಕೊಳ್ಳಲು ಒಂದು ಅವಕಾಶ ಇದ್ದೇ ಇರುತ್ತದೆ ಎಂಬ ನಂಬಿಕೆಯಲ್ಲಿ ಕೆಲಸ ಮಾಡಿ ಸನ್ಮಾನ ಗೌರವವನ್ನು ಪಡೆದಿದ್ದಾರೆ.