Publish Date: Tue, 25 Dec 2018 (12:45 IST)
Updated Date: Tue, 25 Dec 2018 (12:50 IST)
ಕೊಪ್ಪಳ: ಸಂಪುಟ ಪುನಾರಚನೆಯ ಬಳಿಕ ಕಾಂಗ್ರೆಸ್ ನಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಸಚಿವ ಸ್ಥಾನ ಸಿಗದ ಹಿನ್ನಲೆ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅಥವಾ ಯಾವುದೇ ಕಾಂಗ್ರಸ್ ನಾಯಕರ ಮೊಬೈಲ್ ಗೂ ಸಿಗದೇ ಕೇಂದ್ರ ಸಚಿವರ ಜೊತೆಯಲ್ಲಿಯೇ ಸುತ್ತಾಟ ನಡೆಸುತ್ತಿದ್ದಾರೆ.
ಪಿಯೂಷ್ ಗೋಯೆಲ್ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ. ಆನಂದ್ ಸಿಂಗ್ ಪತ್ನಿ ಮತ್ತು ಅಳಿಯ ಪಿಯೂಷ್ ಗೋಯೆಲ್ ಅವರ ಜತೆಗಿದ್ದರು. ಇದನ್ನೆಲ್ಲಾ ನೋಡಿದರೆ ಆನಂದ್ ಸಿಂಗ್ ಬಿಜೆಪಿಯತ್ತ ಹೋಗಲಿದ್ದಾರಾ ಎಂಬ ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.
ಹಾಗೇ ರಾಮಲಿಂಗಾರೆಡ್ಡಿಯನ್ನು ಬಿಜೆಪಿಯತ್ತ ಸೆಳೆಯುವ ಸಲುವಾಗಿ ಈಗಾಗಲೇ ಬಿಜೆಪಿಯ ಶಾಸಕರು ಕೂಡ ರಾಮಲಿಂಗಾರೆಡ್ಡಿ ಮನೆಗೆ ಭೇಟಿ ನೀಡಿದ್ದಾರೆ. ಇದು ಕೂಡ ಕುತೂಹಲಕ್ಕೆ ಕಾರಣವಾಗಿದೆ.