Publish Date: Sat, 23 Jul 2022 (11:35 IST)
Updated Date: Sat, 23 Jul 2022 (11:37 IST)
ಬೆಂಗಳೂರು : ಚಾಮರಾಜಪೇಟೆ ಈದ್ಗಾ ವಿವಾದ ಬಗೆಹರಿಯದ ಸಮಸ್ಯೆ ಆಗಿದೆ.
ಬಿಬಿಎಂಪಿ ಮತ್ತು ವಕ್ಫ್ ಬೋರ್ಡ್ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ಈದ್ಗಾ ಮೈದಾನ ನಮ್ಮದೇ ಅಂತಾ ವಕ್ಫ್ ಬೋರ್ಡ್ ಬಿಬಿಎಂಪಿಗೆ ವಾರ್ನಿಂಗ್ ನೀಡಿದೆ.
ಚಾಮರಾಜಪೇಟೆ ಈದ್ಗಾ ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ವಿವಾದ ಬಗೆಹರಿಸದ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಸಂಘಟನೆಗಳು ಪ್ರತಿಭಟನೆ ಜೊತೆಗೆ ಹೋರಾಟವನ್ನು ಮಾಡ್ತ ಇದ್ದಾರೆ.
ಬಿಬಿಎಂಪಿ ಸ್ವತ್ತು ಎಂದು ಹೇಳಿಕೊಂಡಿರುವುದರಿಂದಾಗಿ ಬಿಬಿಎಂಪಿ ಸಮಸ್ಯೆ ಪರಿಹಾರ ಮಾಡುವಲ್ಲಿ ನಿಧಾನ ಮಾಡ್ತಿದೆ. ಒಂದು ಕಡೆ ವಕ್ಫ್ ಬೋರ್ಡ್ ಕೂಡ ನಮ್ಮ ಸ್ವತ್ತು ಸುಪ್ರೀಂ ಕೋರ್ಟ್ ಆದೇಶದಲ್ಲಿ ಉಲ್ಲೇಖ ಆಗಿದೆ.
ತೆರೆಮರೆಯಲ್ಲಿ ಸಿಎಂ ಬಳಿ ಚರ್ಚೆ ಮಾಡ್ತಾ ಇದ್ದು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ.