Publish Date: Tue, 19 Jul 2022 (19:52 IST)
Updated Date: Tue, 19 Jul 2022 (18:54 IST)
ಬೆಂಗಳೂರಿನ ಚಾಮರಾಜಪೇಟೆ ಮೈದಾನದ ಕಿಚ್ಚು ಆರುವ ಮುನ್ನವೇ ಈಗ ಮತ್ತೊಂದು ಕಿಡಿ ಶುರುವಾಗಿದೆ. ವಿಜಯನಗರದ ಮಸ್ ಜಿದ್ ಎ ಅಲ್ ಖುಬ ಎಂಬ ಮಸೀದಿಯನ್ನ ಡೆಮಾಲಿಷನ್ ಮಾಡಲು ಬಿಬಿಎಂಪಿ ಯಿಂದ ನೋಟೀಸ್ ನೀಡಲಾಗಿದೆ.
ವಿಜಯನಗರದಲ್ಲಿರೋ ಮಸ್ ಜಿದ್ ಎ ಅಲ್ ಖುಬ ಮಸೀದಿಯೂ ಸಾರ್ವಜನಿಕರ ಓಡಾಟಕ್ಕೆ ಮೀಸಲಿಟ್ಟ ಐದು ಅಡಿ ಪ್ಯಾಸೇಜ್ ನ್ನ ಒತ್ತುವರಿ ಮಾಡ್ಕೊಂಡು ಕಟ್ಟಡಲಾಗಿದೆ. ಈಗ ಒತ್ತುವರಿ ಮಾಡಿ ನಿರ್ಮಿಸಿರುವ ಭಾಗವನ್ನ ತೆರವು ಮಾಡಿ ಬಿಬಿಎಂಪಿ ವಶಕ್ಕೆ ಪಡೆಯಲು ಆದೇಶ ಹೊರಡಿಸಲಾಗಿದೆ. ಒತ್ತುವರಿ ಭಾಗವನ್ನ ತೆರವು ಮಾಡಲು ಮಸ್ ಜಿದ್ ಎ ಅಲ್ ಖುಬ ಮಸೀದಿಯ ಮುಖ್ಯಸ್ಥರಿಗೆ ಬಿಬಿಎಂಪಿ ನೋಟೀಸ್ ಕೊಟ್ಟಿದೆ.