Select Your Language

Notifications

webdunia
webdunia
webdunia
webdunia

ಬೆಸ್ಕಾಂನಿಂದ ಫ್ರೀಯಾಗಿ ಡಿಜಿಟಲ್ ಮೀಟರ್ ಅಳವಡಿಕೆ

ಬೆಸ್ಕಾಂನಿಂದ ಫ್ರೀಯಾಗಿ ಡಿಜಿಟಲ್ ಮೀಟರ್ ಅಳವಡಿಕೆ
ಬೆಂಗಳೂರು , ಮಂಗಳವಾರ, 19 ಜುಲೈ 2022 (18:39 IST)
ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು (ಬೆಸ್ಕಾಂ) ವಿದ್ಯುತ್ ಸೋರಿಕೆಯನ್ನು ತಡೆಗಟ್ಟಲು ಮನೆಗಳಿಗೆ ಹೊಸ ಡಿಜಿಟಲ್ ಮೀಟರ್‌ಗಳನ್ನು ಅಳವಡಿಸಲು ಮುಂದಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಗ್ರಾಹಕರ ಮನೆಗಳಲ್ಲಿ ಇರುವಂತಹ ಹಳೇ ಮೀಟರ್‌ಗಳನ್ನು ಬದಲಾಯಿಸಿ, ಹೊಸ ಡಿಜಿಟಲ್ ಮೀಟರ್ ಅಳವಡಿಸಲಾಗುತ್ತದೆ.
ಇದಕ್ಕೆ ಯಾವುದೇ ಶುಲ್ಕ ಪಾವತಿ ಮಾಡಬೇಕಿಲ್ಲ.
 
ಮೀಟರ್ ಬದಲಾವಣೆಗೆ ಗ್ರಾಹಕರು ಯಾವುದೇ ರೀತಿಯ ಹಣವನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಜುಲೈ 16ರಂದು ಬೆಸ್ಕಾಂನ 147 ಉಪವಿಭಾಗಗಳಲ್ಲಿ ಗ್ರಾಹಕರ ಸಂವಾದ ಸಭೆಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಸಾವಿರಾರು ಗ್ರಾಹಕರು ಪಾಲ್ಗೊಂಡು ವಿದ್ಯುತ್ ಸಮಸ್ಯೆಗಳ ಕುರಿತು ಚರ್ಚಿಸಿದ್ದರು.
 
ನಗರ ವ್ಯಾಪ್ತಿಯಲ್ಲಿರುವ ಗ್ರಾಮಗಳಿಗೆ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ, ಆದಷ್ಟು ಬೇಗ ವಿದ್ಯುತ್‌ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿಂದೆ ಬೇಕಾಬಿಟ್ಟಿಯಾಗಿ ವಿದ್ಯುತ್‌ ಸೋರಿಕೆಯಾಗಿದ್ದು, ಇದನ್ನು ತಡೆಗಟ್ಟಲು ಪ್ರತಿ ಮನೆಗಳಿಗೂ ಡಿಜಿಟಲ್‌ ಮೀಟರ್‌ ಕಲ್ಪಿಸಲು ಬೆಸ್ಕಾಂ ಪ್ಲಾನ್‌ ರೂಪಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯಲ್ಲಿ ಬಾಂಬ್ ಬೆದರಿಕೆ ವಿದ್ಯಾರ್ಥಿ ಬಂಧನ